ಬಿಗ್ ನ್ಯೂಸ್ : ಕೊರೋನಾ ನಿವಾರಣೆಗೆ ಸಿಕ್ಕೇಬಿಡ್ತು ಸಿಂಪಲ್ ಸೊಲ್ಯೂಷನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬರ್ಲಿನ್, ಆ.11-ಔಷ ಮಳಿಗೆಗಳಲ್ಲಿ ಲಭಿಸುವ ಮೌತ್‍ವಾಷ್‍ನಿಂದ ಕಿಲ್ಲರ್ ಕೊರೊನಾ ವೈರಸ್ ಸೋಂಕನ್ನು ನಿಷ್ಕ್ರಿಯಗೊಳಿಸಬಹುದು ಸಂಶೋಧನಾ ಅಧ್ಯಯನವೊಂದು ತಿಳಿಸಿದೆ.

ವಾಣಿಜ್ಯವಾಗಿ ಲಭ್ಯವಿರುವ ಮೌತ್‍ವಾಷ್‍ನಿಂದ ಗಾರ್ಗಲ್ (ಬಾಯಿ ಮುಕ್ಕಳಿಸುವಿಕೆ) ಮಾಡುವುದರಿಂದ ಬಾಯಿ ಮತ್ತು ಗಂಟಲಿನಲ್ಲಿ ಇರುವ ವೈರಸ್ ಕಣಗಳ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ.

ಮೌತ್‍ವಾಷ್‍ನನ್ನು ದಿನಕ್ಕೆ ಕನಿಷ್ಠ ಎರಡು ಬಾರಿ ಉಪಯೋಗಿಸುವುದರಿಂದ ಕೋವಿಡ್-18 ವೈರಸ್ ಸೋಂಕು ಹಬ್ಬುವ ಸಾಧ್ಯತೆಯನ್ನೂ ಸಹ ಕಡಿಮೆ ಮಾಡಬಹುದು ಎಂದು ಜರ್ಮನಿ ರಾಜಧಾನಿ ಬರ್ಲಿನ್‍ನಲ್ಲಿರುವ ರೋಹ್ರ್ ಯೂನಿವರ್ಸಿಟಿ ಬೋಚುಮ್‍ನ ಸಂಶೋಧಕರ ತಂಡವೊಂದು ತಿಳಿಸಿದೆ.

ಆದರೆ ಕೋವಿಡ್-19 ತೀವ್ರ ಸೋಂಕಿನಿಂದ ನರಳುತ್ತಿರುವ ರೋಗಿಗಳು ಮತ್ತು ಹೊಸ ಕೊರೊನಾ ವೈರಸ್ ಸಾರ್ಸ್-ಕೋವ್-2 ಸೋಂಕು ಚಿಕಿತ್ಸೆಗೆ ಮËತ್‍ವಾಸ್‍ಗಳು ಸೂಕ್ತವಲ್ಲ ಮತ್ತು ಪರಿಣಾಮಕಾರಿಯಲ್ಲ ಎಂದು ಸಾಂಕ್ರಾಮಿಕ ರೋಗಗಳ ಕುರಿತ ನಿಯತಕಾಲಿಕೆಯೊಂದರಲ್ಲಿ ಸಂಶೋಧಕರು ತಿಳಿಸಿದ್ದಾರೆ.

ಕೊರೊನಾದಿಂದ ಬಳಲುತ್ತಿರುವ ರೋಗಿಗಳಲ್ಲಿ ವೈರಸ್ ಕಣಗಳು ಅಥವಾ ವೈರಾಣುಗಳ ಹೊರೆ ಅಕ ಪ್ರಮಾಣದಲ್ಲಿ ಇರುತ್ತದೆ. ಇದನ್ನು ಬಾಯಿ ಮಾರ್ಗ, ಗಂಟಲು ಮತ್ತು ಶ್ವಾಸಕೋಶದಲ್ಲಿ ಪತ್ತೆ ಮಾಡಬಹುದು.

ಅಲ್ಪ, ಲಘು ಮತ್ತು ಶಾರಾರಣ ಸೋಂಕು ಇರುವ ರೋಗಿಗಳು ಮೌತ್‍ವಾಷ್ ಬಳಸುವುದರಿಂದ ಸಾಕಷ್ಟು ಪ್ರಯೋಜನವಾಗುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

Facebook Comments

Sri Raghav

Admin