ಮಧ್ಯಪ್ರದೇಶ ಸಿಎಂ ಕಮಲ್‍ನಾಥ್ ಪರಮಾಪ್ತರಿಗೆ ಐಟಿ ಬಿಸಿ, 9 ಕೋಟಿ ರೂ. ಹವಾಲ ಹಣ ವಶ ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಇಂದೋರ್, ಏ.7- ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಮಧ್ಯಪ್ರದೇಶ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಧುರೀಣ ಕಮಲ್‍ನಾಥ್ ಅವರ ಪರಮಾಪ್ತರಿಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ. ಚುನಾವಣೆಗಾಗಿ ಹವಾಲ ಮಾರ್ಗದ ಮೂಲಕ ಹಣ ಸಾಗಿಸಲು ಯತ್ನಿಸುತ್ತಿದ್ದ ಆರೋಪದ ಮೇಲೆ ಕಮಲ್‍ನಾಥ್ ಅವರ ಇಬ್ಬರು ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ 50 ಕಡೆ ದಾಳಿಗಳನ್ನು ನಡೆಸಲಾಗಿದೆ. ದಾಳಿ ವೇಳೆ 9 ಕೋಟಿ ರೂ. ನಗದು ಹಾಗೂ ದಾಖಲೆ ಪತ್ರಗಳನ್ನು ಜಪ್ತಿ ಮಾಡಲಾಗಿದೆ.

ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ನಾಯಕರ ಮನೆಗಳ ಮೇಲೆ ಐಟಿ ದಾಳಿಗಳ ಬೆನ್ನಲ್ಲೇ ಈಗ ಮತ್ತೊಂದು ರೇಡ್ ನಡೆದಿದೆ. ಇದು ಪ್ರತಿಪಕ್ಷಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈ ದಾಳಿಯಿಂದ ಮುಖ್ಯಮಂತ್ರಿ ಕಮಲ್‍ನಾಥ್ ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರಿಗೆ ತೀವ್ರ ಇರಿಸುಮುರಿಸು ಉಂಟಾಗಿದೆ.  ಕಮಲ್‍ನಾಥ್ ಅವರ ವಿಶೇಷ ಕರ್ತವ್ಯ ಅಧಿಕಾರಿ (ಒಎಸ್‍ಡಿ) ಪ್ರವೀಣ್ ಕಕ್ಕರ್ ಅವರ ಇಂದೋರ್ ಮತ್ತು ಮಾಜಿ ಸಲಹೆಗಾರ ರಾಜೇಂದ್ರ ಕುಮಾರ್ ರಿಗ್ಲಾನಿ ಅವರ ದೆಹಲಿಯಲ್ಲಿನ ಮನೆಗಳು ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಇಂದು ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ 9 ಕೋಟಿ ರೂ ಹಣ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಹವಾಲಾ ಅಕ್ರಮ ದಂಧೆಯಲ್ಲಿ ಶಾಮೀಲಾದ ಆರೋಪಗಳ ಮೇಲೆ ಇಂದೋರ್ ಮತ್ತು ದೆಹಲಿಯಲ್ಲಿ ಒಟ್ಟು 50ಕ್ಕೂ ಸ್ಥಳಗಳ ಮೇಲೆ ಐಟಿ ರೇಡ್ ನಡೆದಿದೆ. ದಾಳಿ ವೇಳೆ ಅಘೋತ 9 ಕೋಟಿ ರೂ. ನಗದು ಮತ್ತು ಕೆಲವು ಮಹತ್ವದ ದಾಖಲೆಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ 15 ಐಟಿ ಅಧಿಕಾರಿಗಳ ತಂಡವು ಇಂದು 3ರ ನಸುಕಿನಲ್ಲಿ ಇಂದೋರ್‍ನ ಪ್ರತ್ಠಿತ ಜಯ್‍ನಗರ್‍ನ ಪ್ರಮೀಣ್ ಕಕ್ಕರ್ ಮನೆ ಮೇಲೆ ದಾಳಿ ನಡಿಸಿದರು. ಇದೇ ಸಂದರ್ಭದಲ್ಲಿ ಇನ್ನೊಂದು ತಂಡ ಕಕ್ಕರ್ ಅವರಿಗೆ ಸೇರಿದ ಗೋದಾಮು ಮತ್ತು ಇತರ ಸ್ವತ್ತುಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.

ಚುನಾವಣೆಗಾಗಿ ಹವಾಲ ಹಕ್ರಮ ವಹಿವಾಟು ಮೂಲಕ ಹಣ ಹಂಚಲು ಈ ಹಣವನ್ನು ಸಂಗ್ರಹಹಿಸಲಾಗಿತ್ತು ಎಂದು ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.
ಮುಖ್ಯಮಂತ್ರಿ ಕಮಲ್‍ನಾಥ್ ಮಧ್ಯಪ್ರದೇಶದ ಚಿಂಡ್ವಾರ ಮತ್ತು ಹೊಶಾಂಗಬಾದ್‍ನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ಅವರ ಪರಮಾಪ್ತರ ಮನೆಗಲು ಮತ್ತು ಕಚೇರಿಗಳ ಮೇಲೆ ಐಟಿ ದಾಳಿ ನಡೆದಿದೆ.

ನಿವೃತ್ತ ಪೊಲೀಸ್ ಅಧಿಕಾರಿಯೂ ಆಗಿರುವ ಪ್ರವೀಣ್ ಕಕ್ಕರ್ ಕೇಂದ್ರ ಸಚಿವರಾಗಿದ್ದ ಕಾಂತಿಲಾಲ್ ಭುರಿಯಾ ಅವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ವರಿಷ್ಠರೊಂದಿಗೆ ಸಖ್ಯಹೊಂದಿರುವ ಕಕ್ಕರ್ ಕಮಲನಾಥ್ ಮುಖ್ಯಮಂತ್ರಿಯಾದ ನಂತರ ವಿಷೇಶ ಕರ್ತವ್ಯ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು.

ಮಧ್ಯಪ್ರದೇಶದ ಪ್ರಭಾವಿ ಉದ್ಯಮಿಯೂ ಆದ ಕಕ್ಕರ್ ಅವರ ಕುಟುಂಬ ಆಸ್ಪತ್ರೆ ಸೇರಿದಂತೆ ಅನೇಕ ವ್ಯಾಣಿಜ್ಯ ವಹಿವಾಟುಗಳಲ್ಲಿ ತೊಡಗಿದೆ.  ಐಟಿ ಅಧಿಕಾರಿಗಳು ಕಕ್ಕರ್ ಮತ್ತು ರಾಜೇಂದ್ರ ಕುಮಾರ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಮತ್ತಷ್ಟು ಅಕ್ರಮ ವಹಿವಾಟುಗಳು ಬೆಳಗಿಗೆ ಬರುವ ಸಾಧ್ಯತೆಗಳವೆ.

Facebook Comments

Sri Raghav

Admin