‘ವಿದೇಶಿಯರು ಹೋಗುವಂತೆ ಹೋಗಿ ಮಲಗಿ ಬಂದರೆ ಗ್ರಾಮ ವಾಸ್ತವ್ಯ ಆಗುವುದಿಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ಜೂ. 21- ಭಾರತ ಸೇರಿದಂತೆ ವಿಶ್ವದ 200 ದೇಶಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಬೇಕೆಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.

ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿಂದು ಏರ್ಪಡಿಸಿದ್ದ ಅಂತರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗಾಸನವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಆರೋಗ್ಯವಂತರಾಗಿರಬೇಕೆಂದು ಕರೆ ನೀಡಿದರು.

ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಬಗ್ಗೆ ವ್ಯಂಗ್ಯವಾಡಿದ ಅವರು, ಗ್ರಾಮಗಳಿಗೆ ವಿದೇಶಿಯರು ಹೋಗುವಂತೆ ಹೋಗಿ ಅಲ್ಲಿ ಮಲಗಿ ಬಂದರೆ ಗ್ರಾಮ ವಾಸ್ತವ್ಯ ಆಗುವುದಿಲ್ಲ, ಗ್ರಾಮ ವಾಸ್ತವ್ಯವೆಂದು ಹೋದ ಮೇಲೆ ಆ ಗ್ರಾಮ ಹಾಗು ಸುತ್ತಮುತ್ತಲಿನ ಗ್ರಾಮಗಳ ಸಮಸ್ಯೆಗಳು ಬಗೆಹರಿಯಬೇಕು.

ಆಗ ಮಾತ್ರ ಗ್ರಾಮ ವಾಸ್ತವ್ಯಕ್ಕೆ ಬೆಲೆ ಬರುವುದು. ಮುಂದೆ ಬರುವ ಮುಖ್ಯಮಂತ್ರಿಗಳಿಗೂ ಗ್ರಾಮ ವಾಸ್ತವ್ಯ ಮಾದರಿಯಾಗಿರುವಂತಿರಬೇಕು ಎಂದು ತಿಳಿಸಿದರು.

ಬಿಬಿಎಂಪಿ ಸದಸ್ಯರಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ನಮ್ಮ ವರಿಷ್ಠರು ಮತ್ತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸುತ್ತೇನೆ ಎಂದು ಮುನಿಸ್ವಾಮಿ ಉತ್ತರಿಸಿದರು.

Facebook Comments