ಕಾಫಿ ಬೆಳೆಗಾರರ ಹಿತಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡ್ತೀನಿ : ಪ್ರತಾಪ್ ಸಿಂಹ

ಈ ಸುದ್ದಿಯನ್ನು ಶೇರ್ ಮಾಡಿ

ಬೇಲೂರು, ಜೂ.13- ಕಾಫಿ ಬೆಳೆಗಾರರ ಸಂಪೂರ್ಣ ಹಿತ ಕಾಯಲು ಈ ಐದು ವರ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು.

ಬೇಲೂರು ಪಟ್ಟಣದ ಸಮೀಪದ ಪ್ಲಾಂಟರ್ಸ್ ಕ್ಲಬ್ ಅವರಣದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ನಡೆದ ಕಾಫಿ ಬೆಳೆಗಾರರ ಸಮಾವೇಶ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಫಿ ನಾಡು ಎಂದೇ ಖ್ಯಾತಿ ಪಡೆದ ಕೊಡಗು ಅತಿವೃಷ್ಟಿಯಿಂದ ನಲುಗಿದೆ, ಆದರೆ ರಾಜ್ಯ ಸರ್ಕಾರ ಕೇಂದ್ರದ 169 ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಿಲ್ಲ. ಕೇಂದ್ರ ಸರ್ಕಾರ ಕೊಡಗಿನ ಜನರ ಸಂಕಷ್ಟಕ್ಕೆ ಸ್ಪಂದಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿರವರು ತಕ್ಷಣವೇ ಈ ಅನುದಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.

2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮೈತುಂಬ ಸಾಲವೇ ಇತ್ತು, ಆದರೆ ಈಗ ಆ ಪರಿಸ್ಥಿತಿ ಇಲ್ಲ ಹಾಗೂ ಅಭಿವೃದ್ದಿಗೆ ಮುನ್ನುಡಿ ಬರೆಯಬೇಕು ಎಂಬ ಕಾರಣದಿಂದ ಕೇಂದ್ರ ಜಿಎಸ್‍ಟಿ ತೆರಿಗೆ ಜಾರಿ ಮಾಡಿ, ತೆರಿಗೆ ವಂಚಿತರಿಗೆ ಬಿಸಿ ಮುಟ್ಟಿಸಿದೆ,

ಈಗಾಗಲೇ ಮೋದಿ ಸರ್ಕಾರ ಕಿಸಾನ್ ಸನ್ಮಾನ್ ಯೋಜನೆಯಡಿ ಸುಮಾರು 15 ಕೋಟಿ ರೈತರಿಗೆ ವಿಸ್ತರಿಸಿದೆ, ಅಲ್ಲದೆ ದೇಶದಲ್ಲಿ ದಿವಾಳಿಯಾದ ಬ್ಯಾಂಕುಗಳಿಗೆ ನವ ಚೇತನ ನೀಡಿದೆ ಎಂದರು.
ಸಂಸದೆ ಶೋಭ ಕರಂದ್ಲಾಜೆ ಮಾತನಾಡಿ, ಕಾಫಿ ಬೋರ್ಡ್ ಅಧ್ಯಕ್ಷರಿಗೆ ಅಧಿಕಾರ ನೀಡುವುದು, ಬೋರ್ಡ್ ಕಾರ್ಯದರ್ಶಿ ಬದಲಾವಣೆ ತಕ್ಷಣವೇ ಆಗಬೇಕು, ಕಾರಣ ಈತನು ಇರುವ ತನಕ ಕಾಫಿ ಬೆಳೆಗಾರರು ಉದ್ದಾರವಾಗುವುದಿಲ್ಲ, ಕಾರ್ಯದರ್ಶಿ ಬದಲಾವಣೆ ರಾಜ್ಯದ ಸಿಎಂಗೆ ಸೇರಿದೆ, ಇದಕ್ಕೆ ಪ್ರಜ್ವಲ್‍ರೇವಣ್ಣ ಮುಂದಾಗಬೇಕು ತಿಳಿಸಿದರು.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಸಾಕಷ್ಟು ತಿಳಿದಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ದೂರದೆ ಎಲ್ಲ ಸಂಸದರು ಒಟ್ಟಾಗಿ ಬೆಳೆಗಾರರ ಸಮಸ್ಯೆ ಬಗೆ ಹರಿಸಲು ಹೊರಾಟದ ಮೂಲಕ ಮುಂದಾಗುತ್ತೇವೆ. ಕಾಫಿ ಬೆಳೆಗಾರರನ್ನು ನಂಬಿ ಸಾಕಷ್ಟು ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಕಾಫಿ ಬೆಳೆಗಾರರಿಗೆ ಆರ್ಥಿಕವಾಗಿ ಶಕ್ತಿ ನೀಡುವ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಇಂದು ನಮ್ಮ ಪರಿಸರವೇನಾದರೂ ಉಳಿದಿದೆ ಎಂದರೆ ಅದಕ್ಕೆ ನಮ್ಮ ಕಾಫಿ ಬೆಳೆಗಾರರೆ ಕಾರಣ. ನಿಜವಾದ ಪರಿಸರ ಪ್ರೇಮಿಗಳೆಂದರೆ ಕಾಫಿ ಬೆಳೆಗಾರರು ಎಂಬುದನ್ನು ತಿಳಿಯಬೇಕಿದೆ ಎಂದರು.

ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ತೀರ್ಥಮಲ್ಲೇಶ್, ಸಂಸದರಾದ ತೇಜಶ್ವಿಸೂರ್ಯ, ಮೂಡಿಗೆರೆ ಶಾಸಕ ಕುಮಾರಸ್ವಾಮಿ, ಪ್ರಾಣೇಶ್, ಮಾಜಿ ಶಾಸಕ ವಿಶ್ವನಾಥ್, ಕಾಫಿ ಮಂಡಳಿ ಅಧ್ಯಕ್ಷ ಬೋಜೇಗೌಡ, ಜಿಲ್ಲಾ ಸಂಘದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಅತ್ತಕಟ್ಟೆ ಜಗನಾಥ್, ಸುಬ್ಬೇಗೌಡ, ಜಯರಾಂ, ಮುರುಳಿ ಇನ್ನು ಮುಂತಾದವರು ಹಾಜರಿದ್ದರು.

Facebook Comments