ದೇವಾಲಯಗಳ ತೆರವು ಕಾರ್ಯಚರಣೆ ವಿಚಾರ ಕುರಿತು ಸಿಎಂಗೆ ವಿವರಣೆ : ಪ್ರತಾಪ್ ಸಿಂಹ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.13- ದೇವಾಲಯಗಳ ತೆರವು ಕಾರ್ಯಾಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿಯವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು, ಏಕಾಏಕಿ ಎಲ್ಲವನ್ನು ಒಡೆಯುವುದು ಸೂಕ್ತವಲ್ಲ. ಅವುಗಳ ಸ್ಥಳಾಂತರದ ಬಗ್ಗೆ ಸೂಚನೆ ನೀಡುತ್ತೇನೆ ಎಂದು ತಿಳಿಸಿರುವುದಾಗಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಅವರಿಗೆ ಸುಪ್ರೀಂ ಕೋರ್ಟ್ ಆದೇಶ ಏನಿದೆ ಅಂತ ಓದಿ ಅವರಿಗೆ ತಿಳಿಸಿದೆ. ಸುಪ್ರೀಂ ಕೋರ್ಟ್ ದೇವಾಲಯ ಒಡೆಯಲು ಹೇಳಿಲ್ಲ. ಉಚ್ಚಗನಿ ಮಹದೇವಮ್ಮ ದೇವಾಲಯ ರಸ್ತೆಗೆ ಅಡಚಣೆ ಆಗುತ್ತಿರಲಿಲ್ಲ. ಅದು ಐತಿಹಾಸಿಕ ದೇವಾಲಯ. ಇಂತಹ ದೇವಸ್ಥಾನ ಒಡೆದಿದ್ದಾರೆ. ಮೂಲ ವಿಗ್ರಹವನ್ನು ಸ್ಥಳಾಂತರ ಮಾಡದೆ ನೆಲಸಮ ಮಾಡಿದ್ದಾರೆ ಅಂತ ತಿಳಿಸಿದೆ. ಜೊತೆಗೆ ನಂಜನಗೂಡು ದಂಡಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಜಿಲ್ಲಾಡಳಿತಕ್ಕೂ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದರು.

ನಾನು ರಾಜಕಾರಣ ಮಾಡಲು ಬಿಜೆಪಿಗೆ ಬಂದಿಲ್ಲ. ಆರ್‍ಎಸ್‍ಎಸ್ ಹಿನ್ನೆಲೆಯಿಂದ ಬಂದವನು. ಸಂಸದನಾದವರಿಗೆ ಇಡೀ ದೇಶವೆ ಕಾರ್ಯಕ್ಷೇತ್ರ. ಒಂದು ಕ್ಷೇತ್ರಕ್ಕೆ ಸೀಮಿತ ಎಂಬುದು ಬೇಡ ಎಂದು ಶಾಸಕ ಹರ್ಷವರ್ಧನ್‍ಗೆ ತಿರುಗೇಟು ನೀಡಿದರು.

ಮೈಸೂರು ಜಿಲ್ಲಾಯ 92 ದೇವಾಲಯ ತೆರವು ಮಾಡಲು ಜಿಲ್ಲಾಡಳಿತ ಪಟ್ಟಿ ಮಾಡಿದೆ. ಸುಪ್ರಿಂ ಕೋರ್ಟ್ ಆದೇಶದಂತೆ ತೆರವು ಜಿಲ್ಲಾಡಳಿತ ಮುಂದಾಗಿದೆ. ತೆರವು ಕಾರ್ಯಚರಣೆ ನಿಲ್ಲಿಸುವ ಸೂಚನೆಯನ್ನು ಸಿಎಂ ನೀಡಿದ್ದು, ಇದರ ಬಗ್ಗೆ ಅಧಿಕೃತ ಆದೇಶ ಮಾಡುತ್ತೇನೆ. ಏಕಾಏಕಿ ಎಲ್ಲವನ್ನು ಒಡೆಯುವುದು ಸೂಕ್ತವಲ್ಲ. ಅವುಗಳ ಸ್ಥಳಾಂತರದ ಬಗ್ಗೆ ಸೂಚನೆ ನೀಡುತ್ತೇನೆ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆಗದ ರೀತಿಯಲ್ಲಿ. ದೇವಾಲಯ ರಕ್ಷಣೆ ಹೇಗೆ ಎಂಬುದನ್ನು ಚರ್ಚಿಸಿ ಆದೇಶ ಮಾಡುವುದಾಗಿ ಹೇಳಿದ್ದಾರೆ ಎಂದು ವಿವರಿಸಿದರು.

ವP್ಪï ಬೋರ್ಡ್ ಮಾದರಿಯಲ್ಲಿ ನಮಗೂ ಪ್ರತ್ಯೇಕ ಬೋರ್ಡ್ ಮಾಡಬೇಕು. ಈ ರೀತಿ ಪ್ರತ್ಯೇಕ ಬೋರ್ಡ್ ಸ್ಥಾಪಿಸಿದರೆ ಈ ರೀತಿಯ ತೊಂದರೆ ಇಲ್ಲ. ಅಧಿಕಾರಿಗಳು ಸುಪ್ರಿಂ ಕೋರ್ಟ್ ಆದೇಶ ಇದೆ ಅಂತ ದಾರಿ ತಪ್ಪಿಸುತ್ತಿದ್ದಾರೆ. ನಾನು ಅಧಿಕಾರಿಗಳ ಮೇಲೆ ಅಟ್ಯಾಕ್ ಮಾಡುವ ಕೆಲಸ ನಾನು ಮಾಡುತ್ತಿಲ್ಲ. ನಮ್ಮ ಧಾರ್ಮಿಕ ಭಾವನೆಗೆ ಗಾಸಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಸುಪ್ರಿಂ ಕೋರ್ಟ್ ಆದೇಶವನ್ನು ಸರಿಯಾಗಿ ಪಾಲಿಸಿ ಎಂದು ಹೇಳುತ್ತಿರುವುದು ಎಂದರು.

Facebook Comments