ಕೊರೊನಾ ನಿಯಂತ್ರಣಕ್ಕೆ ಮೃತ್ಯುಂಜಯ ಹೋಮ ಮಾಡಿದ ಶಾಸಕ ರೇಣುಕಾಚಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಜೂ.1- ಕೊರೊನಾ ತಡೆ ಹಾಗೂ ನಿಯಂತ್ರಣದ ದೃಷ್ಟಿಯಿಂದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ಹಮ್ಮಿಕೊಳ್ಳಲಾಗಿತ್ತು.

ಹೊನ್ನಾಳಿಯ ಹಿರೇಕಲ್ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಹೋಮ ಕಾರ್ಯಕ್ರಮದ ನೇತೃತ್ವವನ್ನು ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರು ವಹಿಸಿದ್ದರು.

ನರೇಂದ್ರಾ ಮೋದಿ ಪ್ರಧಾನಿವಾಗಿ ಆರು ವರ್ಷ ಪೂರೈಸಿದ ಹಿನ್ನೇಲೆ, ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಕೊರೊನಾ ನಿಯಂತ್ರಣದ ಜೊತೆ ಲೋಕ ಸುಭೀಕ್ಷವಾಗಿರಲೆಂದು ಹೋಮ ನಡೆಸಲಾಯಿತು.

ಆಯುಷ್ ಆರೋಗ್ಯ ವೃದ್ದಿಗೆ, ರೈತ ವರ್ಗದ ಒಳಿತಿಗೆ, ಕಾಲಕಾಲಕ್ಕೆ ಮಳೆ ಬೆಳೆಯಾಗಲೆಂದು ಈ ವೇಳೆ ದೇವರಲ್ಲಿ ಪ್ರಾರ್ಥಿಸಲಾಯಿತು.

Facebook Comments