ಕಸದ ಗಾಡಿ ಚಲಾಯಿಸಿದ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಮಾ.14- ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುವ ಶಾಸಕ ಎಂಪಿ ರೇಣುಕಾಚಾರ್ಯ ಅವರು ಕಸದ ಗಾಡಿ (ಟಂಟಂ ಆಟೋ) ಚಲಾಯಿಸುವ ಮೂಲಕ ತ್ಯಾಜ್ಯ ವಿಲೇವಾರಿ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಜಿಲ್ಲಾಯ ಹೊನ್ನಾಳಿ ತಾಲೂಕಿನ ಚೀಲೂರು ಗ್ರಾಮ ಪಂಚಾಯತ್‍ನ ಹೊಸ ಕಸದ ಗಾಡಿಗೆ ಚಾಲನೆ ನೀಡಿದ ಬಳಿಕ ತಾವೇ ಚಾಲನೆ ಮಾಡಿದರು.

ಚೀಲೂರಿನಲ್ಲಿ ನಡೆದ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಹೊಸದಾಗಿ ಖರೀದಿಸಿದ್ದ ಕಸ ಸಂಗ್ರಹಿಸುವ ಆಟೋಗಳ ಏರಿ ಚಾಲನೆ ಮಾಡಿದ ಬಳಿಕ ತ್ಯಾಜ್ಯ ವಿಲೇವಾರಿ ಘಟಕದ ಲೋಕಾರ್ಪಣೆ ಮಾಡಿದರು.

Facebook Comments