ಪಾರ್ಲಿಮೆಂಟ್‍ಗೆ ನವಜಾತ ಶಿಶು ಜೊತೆ ಆಗಮಿಸಿದ ಸಂಸದ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಜಿಲ್ಯಾಂಡ್, ಆ.22- ಸಂಸತ್‍ಗೆ ನವಜಾತ ಶಿಶುವಿನೊಂದಿಗೆ ಸಂಸದರೊಬ್ಬರು ಪಾರ್ಲಿಮೆಂಟ್‍ಗೆ ಆಗಮಿಸಿ ಗಮನ ಸೆಳೆದ ಅಪರೂಪದ ಪ್ರಸಂಗ ನ್ಯೂಜಿಲ್ಯಾಂಡ್‍ನಲ್ಲಿ ನಡೆದಿದೆ. ವಯಾರಿಕಿ ಕ್ಷೇತ್ರದ ಸಂಸದ ಮತ್ತು ಲೇಬರ್ ರೆಪ್ರೆಸೆಂಟಿಟೀವ್ ನಾಯಕ ಟಮಟಿ ಕೋಫಿ ಅವರು ತಮ್ಮ ಪತ್ನಿಯ ಹೆರಿಗೆ ಉದ್ದೇಶಕ್ಕಾಗಿ ರಜೆ ಹೇಳಿದ್ದರು.

ಜು.10ರಂದು ಅವರಿಗೆ ಗಂಡು ಮಗು ಜನಿಸಿತ್ತು. ಟಿ.ಸ್ಮಿತ್ ಕೋಫಿ ಎಂದು ಈ ಮಗುವಿಗೆ ನಾಮಕರಣ ಮಾಡಿದರು. ರಜೆ ನಂತರ ನಿನ್ನೆ ಅವರು ಮಗು ಸಮೇತ ಪಾರ್ಲಿಮೆಂಟ್‍ಗೆ ಬಂದಾಗ ಆಡಳಿತ ಮತ್ತು ವಿಪಕ್ಷದ ಸದಸ್ಯರು ಕೋಫಿ ಮತ್ತು ಅವರ ಮುದ್ದಾದ ಗಂಡು ಮಗುವನ್ನು ಸ್ವಾಗತಿಸಿದರು.

ಮಗುವಿನ ಜೊತೆ ಕೋಫಿ ಹಾಜರಾಗಲು ಸ್ಪೀಕರ್ ಅನುಮತಿ ನೀಡಿದ್ದರು. ಸಂಸದರು ಪಾರ್ಲಿಮೆಂಟ್ ಕಲಾಪದಲ್ಲೇ ಮಗುವಿಗೆ ಹಾಲು ಬಾಟಲ್‍ನಲ್ಲಿ ಹಾಲು ಕುಡಿಸುತ್ತಿರುವ ದೃಶ್ಯ ಇಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಗ್ರೀನ್ ಪಾರ್ಟಿ ಸಂಸದರೊಬ್ಬರು ಈ ಚಿತ್ರವನ್ನು ತಮ್ಮ ಗೂಗಲ್‍ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ಇಂತಹ ಮಗು ಸಂಸತ್‍ನಲ್ಲಿ ಇದ್ದರೆ ವಿರೋಧ ಪಕ್ಷಗಳವರು ಗಲಾಟೆ ಮಾಡುವುದಿಲ್ಲ ಎಂದು ಸ್ಪೀಕರ್ ಹಾಸ್ಯ ಚಟಾಕಿ ಹಾರಿಸಿದರು.

Facebook Comments