ಎಂಆರ್‌ಪಿಎಲ್‌ನಲ್ಲಿ ಬಿಎ, ಬಿ.ಕಾಂ, ಬಿಬಿಎಂ, ಬಿಬಿಎ ಮುಗಿಸಿದವರಿಗೆ ಉದ್ಯೋಗಾವಕಾಶ..!

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ (ಎಂಆರ್‌ಪಿಎಲ್) 233 ವಿವಿಧ ಹುದ್ದೆಗಳಿಗ ನೇಮಕಾತಿಗಾಗಿ ಎಂಆರ್‌ಪಿಎಲ್ ನೇಮಕಾತಿ 2019 ಪ್ರಕಟಣೆ ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆಯಾಗಿದೆ. 11.10.2019 ಅರ್ಜಿ ಸಲ್ಲಿಸಲು ಆರಂಭದ ದಿನಾಂಕವಾಗಿದ್ದು. 09.11.2019ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ (ಎಂಆರ್‌ಪಿಎಲ್) 233 ವಿವಿಧ ಹುದ್ದೆಗಳಿಗೆ (ಸೆಕ್ಯುರಿಟಿ ಇನ್ಸ್‌ಪೆಕ್ಟರ್, ಕಿರಿಯ ಅಧಿಕಾರಿ) ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಬಿ.ಎಸ್ಸಿ, ಡಿಪ್ಲೊಮಾ, ಬಿ.ಕಾಂ, ಬಿಬಿಎಂ, ಬಿಬಿಎ, ಬಿಸಿಎ, ಬಿಎ, ಸ್ನಾತಕೋತ್ತರ ಪದವಿ ಅಥವಾ ಅದರ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಸಂಬಂಧಿತ ನೀಡಲಾದ ಪ್ರಮಾಣಪತ್ರ.

ವಯಸ್ಸಿನ ಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 26 ರಿಂದ 45 ವರ್ಷಗಳು. ಇನ್ನು ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಸಾಮಾನ್ಯ / ಓಬಿಸಿ ಅಭ್ಯರ್ಥಿಗಳು 100/-ರೂ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳು ವಿನಾಯಿತಿ ಶುಲ್ಕ ಅರ್ಜಿ ಶುಲ್ಕವನ್ನು ಆನ್ಲೈನ್ಮೂಲಕ ಪಾವತಿಸಬಹುದು.
ಆಯ್ಕೆ ಪ್ರಕ್ರಿಯೆ: ಆನ್ಲೈನ್ ಪ್ರಾಥಮಿಕ ಪರೀಕ್ಷೆ, ಆನ್ಲೈನ್ ಮುಖ್ಯ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಗಮನಿಸಿ:

Facebook Comments