200 ಸಿಕ್ಸ್ ಸಿಡಿಸಿದ ಧೋನಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.22- ಕಳೆದ ರಾತ್ರಿ ಆರ್‍ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರಸಿಂಗ್ ಧೋನಿ 200ನೆ ಸಿಕ್ಸರ್ ದಾಖಲಿಸುವ ಮೂಲಕ ಐಪಿಎಲ್‍ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತದ ಆಟಗಾರರಾಗಿ ಹೊರಹೊಮ್ಮಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ಆರ್‍ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ 7 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಧೋನಿ ಈ ನೂತನ ಸಾಧನೆ ದಾಖಲಿಸಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹಾಗೂ ಸಿಎಸ್‍ಕೆಯ ಆಟಗಾರ ಸುರೇಶ್‍ರೈನಾ 190 ಸಿಕ್ಸರ್ ಸಿಡಿಸುವ ಮೂಲಕ ಧೋನಿಯ ನಂತರ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರರಾಗಿ ಬಿಂಬಿಸಿಕೊಂಡಿದ್ದಾರೆ.

ಧೋನಿ ನಿನ್ನೆ 48 ಎಸೆತಗಳಲ್ಲೇ 5 ಬೌಂಡರಿ, 7 ಸಿಕ್ಸರ್ ಸಿಡಿಸುವ ಮೂಲಕ 84 ರನ್ ಗಳಿಸುವ ಮೂಲಕ 4000 ರನ್ ಗಳಿಸಿದ ಐಪಿಎಲ್ ನಾಯಕನಾಗಿದ್ದಾರೆ.

ಐಪಿಎಲ್‍ನಲ್ಲಿ ಕೆರಿಬಿಯನ್‍ನ ಸ್ಫೋಟಕ ಆಟಗಾರ ಕ್ರಿಸ್‍ಗೇಲ್ (323 ಸಿಕ್ಸ್) ಹಾಗೂ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ (204 ಸಿಕ್ಸ್) ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಅಗ್ರ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

Facebook Comments