ಕುಕ್ಕುಟೋದ್ಯಮದತ್ತ ಮಹೇಂದ್ರಸಿಂಗ್ ಧೋನಿ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ, ನ. 12- ಐಪಿಎಲ್ 2020ರ ಆವೃತ್ತಿ ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್‍ನ ನಾಯಕ ಮಹೇಂದ್ರಸಿಂಗ್‍ಧೋನಿ ಈಗ ಕುಕ್ಕುಟೋದ್ಯಮ(ಕೋಳಿ ಸಾಕಾಣಿಕೆ)ಯತ್ತ ಮನಸ್ಸು ಮಾಡಿದ್ದಾರೆ ಎಂದೆನಿಸುತ್ತದೆ.  ಧೋನಿಗೆ ಮಧ್ಯಪ್ರದೇಶದ ಬುಡಕಟ್ಟು ಜಿಲ್ಲೆಯ ಕಡಕ್ನಾಥ್ ಕಪ್ಪು ಕೋಳಿಯು ತುಂಬಾ ಅಚ್ಚುಮೆಚ್ಚಾಗಿರುವುದರಿಂದ 2000 ಸಾವಿರ ಕಡಕ್ನಾಥ್ ಜಾತಿಯ ಕೋಳಿ ಮರಿಗಳಿಗೆ ಆರ್ಡರ್ ಮಾಡಿದ್ದಾರೆ ಎಂಬ ಅಂಶ ತಿಳಿದುಬಂದಿದೆ.

ಮಹೇಂದ್ರಸಿಂಗ್ ಧೋನಿ ಭಾರತ ತಂಡದಿಂದ ನಿವೃತ್ತಿ ಹೊಂದಿದ ನಂತರ ಕೃಷಿಕನಾಗುವತ್ತ ಚಿತ್ತ ಹರಿಸಿದ್ದು ಈಗ ಕುಕ್ಕುಟೋದ್ಯಮದತ್ತ ಹೆಜ್ಜೆ ಹಾಕಿರುವುದನ್ನು ನೋಡಿದರೆ ಅವರು ಸಿಎಸ್‍ಕೆ ತಂಡದ ನಾಯಕತ್ವಕ್ಕೂ ಗುಡ್‍ಬೈ ಹೇಳುವ ಕ್ರಿಕೆಟ್ ಜೀವನಕ್ಕೆ ತಿಲಾಂಜಲಿ ಇಡಲಿದ್ದಾರೆ ಎಂಬ ಅನುಮಾನಗಳು ಮೂಡಿವೆ.

ಧೋನಿ ಅವರ ಅರ್ಗಾನಿಕ್ ಫಾರ್ಮ್‍ನ ಸಾವಯವ ಕೃಷಿಗೆ ಸಂಬಂಧಿಸಿದ ತಂಡದ ಕುನಾಲ್‍ಗೌರವ್ ಅವರು ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಕೋಳಿ ಕೃಷಿಕ ವಿನೋದ್ ಮೇಧಾ ಅವರಿಗೆ ಡಿಸೆಂಬರ್ 15ರವರೆಗೆ 2 ಸಾವಿರ ಕೋಳಿ ಮರಿಗಳನ್ನು ಸಪ್ಲೈ ಮಾಡುವಂತೆ ಕೋರಿದ್ದು ಮುಂಗಡ ಹಣವನ್ನು ನೀಡಿರುವು ದರಿಂದ ಧೋನಿಯು ಕುಕ್ಕುಟೋದ್ಯಮ ದಲ್ಲಿ ಮುಂದುವರೆ ಯುವ ಲಕ್ಷಣಗಳು ಗೋಚರಿಸುತ್ತಿವೆ.

2019ರಲ್ಲಿ ಧೋನಿ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿದ ನಂತರ ಧೋನಿ 43 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡುವ ಮೂಲಕ ಗಮನ ಸೆಳೆದರು. ಆ ಫೋಟೋಗಳು ಕೂಡ ವೈರಲ್ ಆಗಿದ್ದವು. ಸಾವಯವ ಕೃಷಿ ಅಲ್ಲದೆ ಧೋನಿ ಅವರ ಕೃಷಿ ತಂಡದವರು ದೇಶೀಯ ಸಹೀವಾಲ್ ತಳಿಯ ಹಸು, ಬಾತುಕೋಳಿ, ಕೋಳಿ ಸಾಕಾಣಿಕೆಯನ್ನು ಮಾಡುತ್ತಿದ್ದು ಈಗ ಕಡಕ್ನಾಥ್ ಕಪ್ಪು ಕೋಳಿ ಸಾಕಾಣಿಕೆಗೆ ಮುಂದಾಗುವ ಮೂಲಕ ಕುಕ್ಕುಟೋದ್ಯಮವನ್ನು ಉತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವತ್ತ ಧೋನಿ ಚಿಂತಿಸಿದಂತಿದೆ.

ಮಧ್ಯಪ್ರದೇಶದ ಬುಡಕಟ್ಟು ಮೂಲದವರು ಹೆಚ್ಚಾಗಿ ಸಾಕಾಣಿಕೆ ಮಾಡುನ ಕಡಕ್ನಾಥ್  ಕೋಳಿಯ ಮಾಂಸ ಹಾಗೂ  ಮೊಟ್ಟೆಗೆ ದೇಶಾದ್ಯಂತ ಉತ್ತಮ ಬೇಡಿಕೆ ಇದೆ. ಕಡಕ್ನಾಥ್ ಜಾತಿಯ ಕೋಳಿಯಲ್ಲಿ ಕೊಬ್ಬಿನಾಂಶ ಕಡಿಮೆ ಇರುವುದರಿಂದ ಮಧುಮೇಹಿ ಹಾಗೂ ಹೃದ್ರೋಗಕ್ಕೊಳಗಾಗಿರುವ ಮಾಂಸ ಪ್ರಿಯರಿಗೆ ತುಂಬಾ ಅಚ್ಚುಮೆಚ್ಚಾಗಿದೆ. 2018ರಲ್ಲಿ ಜಬುವಾ ಜಿ¯್ಲÉಯ ಈ ತಳಿಗೆ ಜಿಐ ಟ್ಯಾಗ್ (ಭೌಗೋಳಿಕ ವೈಶಿಷ್ಟ್ಯತೆಯ ಗುರುತು) ಕೂಡ ಲಭಿಸಿದೆ.

Facebook Comments