ಧೋನಿ ಕನಸಿಗೆ ಅಡ್ಡಿಯಾದ ‘ಹಕ್ಕಿ ಜ್ವರ’

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ, ಜ. 14- ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿಯ ಕುಕ್ಕುಟೋದ್ಯಮ ಕನಸಿಗೆ ಹಕ್ಕಿ ಜ್ವರ ಕಂಟಕವಾಗಿದೆ. ಧೋನಿ ಕ್ರಿಕೆಟ್ ಜೀವನದಿಂದ ಹೊರಗುಳಿದ ಮೇಲೆ ಸಾವಯವ ಕೃಷಿಯತ್ತ ಚಿತ್ತ ಹರಿಸಿದ್ದರು, ಇವರ ಭೂಮಿಯಲ್ಲಿ ಬೆಳೆದ ತರಕಾರಿಗಳನ್ನು ವಿದೇಶಗಳಿಗೂ ರಫ್ತು ಮಾಡುವ ಮೂಲಕ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದರು.

ಈ ನಡುವೆ ಧೋನಿಗೆ ಕುಕ್ಕುಟೋದ್ಯಮದಲ್ಲೂ ತೊಡಗಿಸಿಕೊಳ್ಳಲು ಮುಂದಾಗಿದ್ದರು ಅದಕ್ಕಾಗಿ ಮಧ್ಯಪ್ರದೇಶದ ಕೋಳಿ ಫಾರಂವೊಂದರಿಂದ 2000 ಕಡಕ್‍ನಾಥ್ ಕೋಳಿಗಳನ್ನು ಕೊಳ್ಳಲು ಮುಂಗಡ ಹಣವನ್ನು ನೀಡಿದ್ದರಾದರೂ ಹಕ್ಕಿಜ್ವರದಿಂದಾಗಿ ಆ ಯೋಜನೆಗೆ ಬ್ರೇಕ್ ಬಿದ್ದಿದೆ. ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರದ ಭೀತಿಯಿಂದ ಕೋಳಿಗಳ ಮಾರಣಹೋಮಕ್ಕೆ ಮುಂದಾಗಿದ್ದು ಇದರಲ್ಲಿ ಧೋನಿಗೆ ಸರಬರಾಜು ಮಾಡಬೇಕಾಗಿದ್ದ ಕಡಕ್‍ನಾಥ್ ಕೋಳಿಗಳು ಕೂಡ ಸೇರಿದ್ದರಿಂದ ಧೋನಿ ತಮ್ಮ ಯೋಜನೆಯನ್ನು ಮುಂದೂಡಿದ್ದಾರೆ.

ಮಧ್ಯಪ್ರದೇಶದ ಝಬುವಾದಲ್ಲಿ ಎಚ್5ಎನ್1 ಸೋಂಕಿನಿಂದ 2500 ಕಡಕ್‍ನಾಥ್ ಜಾತಿಯ ಕೋಳಿಗಳು ಮರಣಪ್ಪನ್ನಿವೆ. ಹೆಚ್ಚು ಪ್ರೊಟೀನ್ ಹಾಗೂ ಕಡಿಮೆ ಕೊಬ್ಬಿನಾಂಶವನ್ನು ಹೊಂದಿರುವ ಕಡಕ್‍ನಾಥ್ ಕೋಳಿಯ ಮಾಂಸಕ್ಕೆ ಅತ್ಯಂತ ಬೇಡಿಕೆ ಇರುವುದರಿಂದ ಧೋನಿ 2850 ಕೋಳಿಗಳಿಗೆ ಆರ್ಡರ್ ಕೊಟ್ಟಿದ್ದರಾದರೂ ಹಕ್ಕಿ ಜ್ವರದ ಭೀತಿಯಿಂದಾಗಿ ಕೋಳಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಕೋಳಿ ಫಾರಂನ ಮಾಲೀಕ ವಿನೋದ್ ಮೇದಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments