ಬ್ರೇಕಿಂಗ್ : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ಗುಡ್ ಬೈ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ( ಎಂ‌.ಎಸ್ ಧೋನಿ) ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಕಳೆದ ಹಲವು ದಿನಗಳಿಂದ ಧೋನಿ ಕ್ರಿಕೆಟ್ ಗೆ ಗುಡ್ ಬೈ ಹೇಳಲಿದ್ದಾರೆ ಎಂಬ ವದಂತಿಗಳನ್ನು ಕೇಳಿ ಬಂದಿದ್ದವು. ಶನಿವಾರ ಇದಕ್ಕೆಲ್ಲ ಸ್ವತಃ ಧೋನಿಯೇ ತೆರೆಎಳೆದಿದ್ದಾರೆ.

ತಮ್ಮ ಇನ್ಸ್ ಟಾ ಗ್ರಾಂ ನಲ್ಲಿ ಇವರಿಗೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳುವ ಮೂಲಕ ಕ್ರಿಕೆಟ್ ನ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಮುನ್ಸೂಚನೆ ನೀಡಿದ್ದಾರೆ.

ಆದರೆ, ಅವರು ಎಲ್ಲಿಯೂ ಅಧಿಕೃತವಾಗಿ ನಿವೃತ್ತಿ ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ ಮುಂಬರುವ ಟ್ವೆಂಟಿ- 20 ನಲ್ಲಿ ಚನ್ನೈ ಪರವಾಗಿ ಆಡಿದ ಬಳಿಕ ನಿವೃತ್ತಿ ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಟ್ವಿಂಟಿ- ಮೊದಲ ವಿಶ್ವಕಪ್ ಹಾಗೂ 2011 ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಧೋನಿ ಅವರ ನಾಯಕತ್ವದಲ್ಲಿ ಭಾರತ ಗೆಲುವು ಸಾಧಿಸಿತ್ತು.

ಮೂಲತಃ ಜಾರ್ಖಾಂಡ್ ನ ರಾಂಚಿಯವರಾದ ಧೋನಿ ಕ್ರಿಕೆಟ್ ನಲ್ಲಿ ಬಹುಬೇಗನೆ ಎತ್ತರಕ್ಕೆ ಬೆಳೆದ ಅಪರೂಪದ ಅಟಗಾರ. ಏಕದಿನ ಹಾಗೂ ಟೆಸ್ಟ್ ಸೇರಿದಂತೆ ಅನೇಕ ಸರಣಿಗಳನ್ನು ಗೆದ್ದಿರುವ ದಾಖಲೆ ಅವರ ಹೆಸರಿನಲ್ಲಿದೆ.

ಭಾರತದ ಕೆಲವೇ ಕೆಲವು ಯಶಸ್ವಿ ನಾಯಕರಲ್ಲಿ ಧೋನಿ ಕೂಡ ಒಬ್ಬರು. ಅವರ ಹೆಲಿಕಾಪ್ಟರ್ ಶ್ಯಾಟ್ ಅಭಿಮಾನಿಗಳ ಪಾಲಿಗೆ ಅಚ್ಚುಮೆಚ್ಚು.

 

View this post on Instagram

 

Thanks a lot for ur love and support throughout.from 1929 hrs consider me as Retired

A post shared by M S Dhoni (@mahi7781) on

Facebook Comments

Sri Raghav

Admin