ಹೊಸ ದಾಖಲೆ ಬರೆದ ಧೋನಿ

ಈ ಸುದ್ದಿಯನ್ನು ಶೇರ್ ಮಾಡಿ

ಸೌಥಾಂಪ್ಟನ್, ಜೂ.6- ದಕ್ಷಿಣ ಆಫ್ರಿಕಾದ ವಿರುದ್ಧದ ಗೆಲುವಿನಲ್ಲಿ ಪಾತ್ರರಾಗಿದ್ದ ಟೀಂ ಇಂಡಿಯಾದ ವಿಕೆಟ್ ಕೀಪರ್ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

2004ರಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಪಾತ್ರ ನಿರ್ವಹಿಸುತ್ತಿರುವ ಮಹೇಂದ್ರಸಿಂಗ್ ಧೋನಿ 600 ಪಂದ್ಯಗಳಲ್ಲಿ ಗೂಟ ರಕ್ಷಕನಾಗುವ ಮೂಲಕ ನೂತನ ದಾಖಲೆ ಬರೆದಿದ್ದಾರೆ.

ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ (596), ಶ್ರೀಲಂಕಾದ ಕುಮಾರಸಂಗಾಕ್ಕಾರ (499) ಹಾಗೂ ಆಸ್ಟ್ರೇಲಿಯಾದ ಆ್ಯಡಂ ಗಿಲ್‍ಕ್ರಿಸ್ಟ್ (485 ನಂತರ ಸ್ಥಾನದಲ್ಲಿ ನಿಂತಿದ್ದಾರೆ. 37ರ ಹರಯದ ಧೋನಿ ನಿನ್ನೆ ದಕ್ಷಿಣ ಆಫ್ರಿಕಾದ ಆ್ಯಂಡಿಲೆ ಪೆಲುಕ್ವಾವೋರನ್ನ ಸ್ಟಂಪಿಂಗ್ ಮಾಡುವ ಮೂಲಕ ಪಾಕಿಸ್ತಾನದ ಮೋಹಿನ್ ಖಾನ್ ಲಿಸ್ಟ್ ಎ ಮಾಡಿದ್ದ 139 ಸ್ಟಂಪಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪೆಲುಕ್ವಾವೋರ ಸ್ಟಂಪಿಂಗ್‍ರ ಮೂಲಕ ಎಂಎಸ್‍ಡಿ ವಿಶ್ವಕಪ್‍ನಲ್ಲಿ 33 ಬ್ಯಾಟ್ಸ್‍ಮನ್‍ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದರೆ, ಶ್ರೀಲಂಕಾದ ಕುಮಾರಸಾಂಗಾಕ್ಕಾರ (54), ಆಸ್ಟ್ರೇಲಿಯಾದ ಆ್ಯಡಂ ಗಿಲ್‍ಕ್ರಿಸ್ಟ್ (52),. ನ್ಯೂಜಿಲೆಂಡ್‍ನ ಬ್ರೆಡಂ ಮೆಕುಲುಂ (32), ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ (31) ಬ್ಯಾಟ್ಸ್‍ಮನ್‍ಗಳನ್ನು ಬಲಿ ಪಡೆದಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ