ಕ್ರಿಕೆಟ್ ಬಿಟ್ಟು ಫುಟ್ಬಾಲ್‍ನತ್ತ ಧೋನಿ..!?

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.7- ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‍ಗೆ ನಿವೃತ್ತಿ ಹೇಳುತ್ತಾರೆ ಎಂಬ ವದಂತಿಗಳು ಹರಡಿರುವಾಗಲೇ ಮಹಿ ಫುಟ್ಬಾಲ್‍ನತ್ತ ಒಲವು ತೋರಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ.

ತಮ್ಮ ಹೆಲಿಕಾಪ್ಟರ್ ಶಾಟ್‍ನಿಂದ ಚೆಂಡನ್ನು ಬೌಂಡರಿ ಗೆರೆ ಮುಟ್ಟಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಸೆಮಿಫೈನಲ್ ನಂತರ ಯಾವುದೇ ಪಂದ್ಯದಲ್ಲೂ ಕಾಣಿಸಿಕೊಳ್ಳದಿರುವುದರಿಂದ ಅವರ ನಡೆ ನಿಗೂಢವಾಗಿಯೇ ಇದೆ.

ವಿಶ್ವಕಪ್‍ನ ನಂತರ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮಹಿ ಈಗ ಫುಟ್ಬಾಲ್ ಆಡುವುದರಲ್ಲಿ ತಲ್ಲೀನರಾಗಿರುವುದು ಅಲ್ಲದೆ ಅವರ ಜೊತೆಗೆ ಬಾಲಿವುಡ್‍ನ ನಟ ಅರ್ಜುನ್‍ಕಪೂರ್ ಕೂಡ ಪಾಲ್ಗೊಂಡಿದ್ದರು ನೋಡಿದರೆ ಮಹಿ ಬಾಲಿವುಡ್‍ಗೆ ಎಂಟ್ರಿ ಕೊಡುತ್ತಾರೆಯೇ ಎಂಬ ಅನುಮಾನವು ಮೂಡುತ್ತಿದೆ.

ಕ್ರಿಕೆಟ್‍ನಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಮಹಿ ಫುಟ್ಬಾಲ್‍ನಲ್ಲೂ ಪ್ರವೀಣರು ಎಂಬುದನ್ನು ಈ ಮೂಲಕ ತೋರಿಸಿದ್ದಾರಾದರೂ ಬಲು ಬೇಗ ಕ್ರಿಕೆಟ್ ಅಂಗಳಕ್ಕೆ ಮರಳುವಂತಾಗಲಿ.

Facebook Comments

Sri Raghav

Admin