ಪುರಸಭೆಗಳ ವ್ಯಾಪ್ತಿಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ : ಎಂಟಿಬಿ ನಾಗರಾಜ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.14- ರಾಜ್ಯದ ಪುರಸಭೆಗಳ ವ್ಯಾಪ್ತಿಯ ನಾಗರಿಕರಿಗೆ ಅನುಕೂಲ ವಾಗುವಂತೆ ಮೂಲ ಸೌಲಭ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ವಿಧಾನಪರಿಷತ್‍ನಲ್ಲಿಂದು ಕಾಂಗ್ರೆಸ್‍ನ ಆರ್.ಧರ್ಮಸೇನ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್‍ಎಫ್‍ಸಿ ಅನುದಾನ, ಕುಡಿಯುವ ನೀರಿನ ಅನುದಾನ, ಸ್ವಚ್ಚಭಾರತ, 2014-15ರ ಹಣಕಾಸು ಅನುದಾನ, ನಗರೋತ್ಥಾನ ಯೋಜನೆಯಡಿ ಆರ್ಥಿಕ ನೆರವುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗಿದೆ ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಸಂಸ್ಥೆಗೆ ವಿಶೇಷವಾಗಿ ಯಾವ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ. ಹಲವಾರು ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಅವುಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇವೆ. ನಾಲ್ಕನೇ ಹಂತದ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಸಲು ಹಣಕಾಸು ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುತ್ತಿದೆ.

2019-20ರ ಸಾಲಿನಲ್ಲಿ 15ನೇ ಹಣಕಾಸು ಆಯೋಗದ ಅಡಿ 238.64 ಕೋಟಿ ಅನುದಾನ ಹಂಚಿಕೆ ಮಾಡಿ, ಬಿಡುಗಡೆ ಮಾಡಲಾಗಿದೆ. 2020-21ನೇ 178.33 ಕೋಟಿ ಹಂಚಿಕೆ ಮಾಡಿ ಅದರಲ್ಲಿ ಮೊದಲ ಕಂತಿನ 35 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು. ನಗರೋತ್ಥಾನ ಯೋಜನೆಯಡಿ ಮೂಲಸೌಲಭ್ಯ ಕಲ್ಪಿಸಲು 2016- 17ರ ಸಾಲಿನಿಂದ 627 ಕೋಟಿ ರೂ.ಅನುದಾನ ನೀಡಲಾಗಿದೆ ಎಂದರು.

Facebook Comments