“ಮದುವೆಯಾಗಿದ್ದು ಅಲ್ಲಿ, ಸಂಸಾರ ಮಾಡುತ್ತಿರುವುದು ಇಲ್ಲಿ” : ಸಿದ್ದುಗೆ ಎಂಟಿಬಿ ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಮಹದೇವಪುರ, ಸೆ.22- ನನ್ನ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷದ ಯಾವೊಬ್ಬ ನಾಯಕರಿಗೂ ಇಲ್ಲ, ಸಿದ್ದರಾಮಯ್ಯ, ರಮೇಶ್‍ಕುಮಾರ್ ಮದುವೆಯಾಗಿದ್ದು ಜೆಡಿಎಸ್‍ನಲ್ಲಿ, ಸಂಸಾರ ಮಾಡುತ್ತಿರುವುದು ಕಾಂಗ್ರೆಸ್‍ನಲ್ಲಿ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಟಾಂಗ್ ನೀಡಿದ್ದಾರೆ. ಮಹದೇವಪುರದಲ್ಲಿರುವ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ರಮೇಶ್‍ಕುಮಾರ್, ಕೃಷ್ಣಬೈರೇಗೌಡ ಇವರೆಲ್ಲ ಯಾವ ಪಕ್ಷದಿಂದ ಬಂದಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.

ಈ ಮೂವರು ಕೂಡ ಬೇರೆ ಕಡೆ ಮದುವೆಯಾಗಿ ಕಾಂಗ್ರೆಸ್‍ನಲ್ಲಿ ಸಂಸಾರ ಮಾಡುತ್ತಿದ್ದಾರೆ ಎಂದು ರಮೇಶ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.  ನಿನ್ನೆ ಹೊಸಕೋಟೆಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಭೆಯಲ್ಲಿ ರಮೇಶ್‍ಕುಮಾರ್ ಅವರು ಎಂಟಿಬಿ ನಾಗರಾಜ್ ಕುರಿತು ಕಾಂಗ್ರೆಸ್‍ನಲ್ಲಿ ತಾಳಿ ಕಟ್ಟಿಸಿಕೊಂಡು ಬಿಜೆಪಿಗೆ ಹೋಗಿ ಸಂಸಾರ ಮಾಡುತ್ತಿದ್ದಾರೆ. ಇಂತಹವರಿಗೆ ನಿಮ್ಮ ಭಾಷೆಯಲ್ಲಿ ಎಂದು ಚಾಟಿ ಬೀಸಿದ್ದರು.

ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ನಾಗರಾಜ್ ಮೇಲಿನಂತೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಅವರು, ಕಾಂಗ್ರೆಸ್‍ಗೆ ಬರುವ ಮುನ್ನವೆ ನಾನು ಶಾಸಕನಾಗಿದ್ದೇ ನನಗೆ ಟಿಕೆಟ್ ನೀಡಿದ್ದು, ಸಿದ್ದರಾಮಯ್ಯ ಅಲ್ಲ, ಎಸ್.ಎಂ.ಕೃಷ್ಣ ಅವರು. ನನ್ನ ಕುರಿತು ಸಿದ್ದರಾಮಯ್ಯ ಸೇರಿದಂತೆ ಇತರೆ ನಾಯಕರು ಮಾಡಿರುವ ಆರೋಪಗಳೆಲ್ಲ ಶುದ್ಧಸುಳ್ಳು ಎಂದು ಹೇಳಿದರು.

ಬೈರತಿ ಸುರೇಶ್ ಬಗ್ಗೆ ಏಕವಚನದಲ್ಲಿ ಮಾತನಾಡಿದ ಎಂಟಿಬಿ ಆತ ಇನ್ನು ಬಚ್ಚಾ ಸಿದ್ದರಾಮಯ್ಯನವರ ಮಗ ರಾಕೇಶ್‍ನನ್ನು ಹಾಳು ಮಾಡಿದ್ದೇ ಇದೇ ಮನುಷ್ಯ ಎಂದು ಹೇಳಿದರು.

Facebook Comments