ಎಂಟಿಬಿ ನಾಗರಾಜ್‍ಗೆ ಸಚಿವ ಸ್ಥಾನ ನೀಡಲು ಮುಖಂಡರ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಹೊಸಕೋಟೆ, ಡಿ.10-ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಹಲವಾರು ಮುಖಂಡರು, ಅಭಿಮಾನಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು. ಪಟ್ಟಣದಲ್ಲಿ ಇಂದು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ತಿಗಳರ ಸಂಘದ ಅಧ್ಯಕ್ಷ ಸಿ.ಜಯರಾಜ್, ಮುಸ್ಲಿಂ ಮುಖಂಡ ಶೌರತ್, ಕುರುಬ ಸಮಾಜದ ಕರಿನಾಗಪ್ಪ, ಕೆ.ದೇವರಾಜ್, ದಲಿತ ಮುಖಂಡ ಮುನಿರಾಜ್, ಲಿಂಗಾಯತ ಸಮುದಾಯದ ನವೀನ್, ಮುಖಂಡ ಹರಿಕುಮಾರ್ ಮತ್ತಿತರರು ಮಾತನಾಡಿ, ಎಂಟಿಬಿ ನಾಗರಾಜ್ ಸೋಲಿಗೆ ಸ್ಥಳೀಯ ಸಂಸದರು ಬೆಂಬಲ ಕೊಡದಿರುವುದೇ ಪ್ರಮುಖ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಹಾಗೂ ಸುಭದ್ರವಾಗಿ ಉಳಿಯಲು ಎಂಟಿಬಿ ನಾಗರಾಜ್ ಅವರ ತ್ಯಾಗ ಕಾರಣ. ಸಚಿವರಾಗಿದ್ದರೂ ರಾಜೀನಾಮೆ ನೀಡಿ ಬಂದಿದ್ದಾರೆ. ಅವರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಯಡಿಯೂರಪ್ಪ ಅವರು ಈ ಮೊದಲು ನುಡಿದಂತೆ ನಡೆದುಕೊಳ್ಳಬೇಕು. ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಆಗ್ರಹಿಸಿದರು.

Facebook Comments