ಡಿಕೆಶಿ ಬಳಿ ವಿಡಿಯೋ ಇದ್ದಿದ್ರೆ ಸುಮ್ಮನಿರುತ್ತಿದ್ದರಾ..? : ಎಂಟಿಬಿ ತಿರುಗೇಟು
ಈ ಸುದ್ದಿಯನ್ನು ಶೇರ್ ಮಾಡಿ
ಬಾಗಲಕೋಟೆ, ನ.29- ವಿಡಿಯೋ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ.
ಡಿಕೆಶಿ ಬಳಿ ವಿಡಿಯೋ ಇದ್ದಿದ್ದರೆ ಸುಮ್ಮನೆ ಕೂರುತ್ತಿರಲಿಲ್ಲ. ಸುಮ್ಮನೆ ಮಾತನಾಡಿದರೆ ಆಗಲ್ಲ ಎಂದು ಹೇಳಿದ್ದಾರೆ. ವಿಡಿಯೋ ಇದ್ದರೆ ಮೊದಲು ಬಿಡುಗಡೆ ಮಾಡಲಿ ಎಂದಿದ್ದಾರೆ.
ನಾವು ಯಾವುದೇ ಗೌಪ್ಯ ಸಭೆ ನಡೆಸಿಲ್ಲ. ಔತಣ ಕೂಟಕ್ಕಾಗಿ ಸೇರಿದ್ದಾಗ ಚರ್ಚೆ ಮಾಡಿದ್ದೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಮುಂಬೈನಲ್ಲಿ 17 ಮಂದಿ ಶಾಸಕರು 15 ದಿನಗಳ ಕಾಲ ಒಟ್ಟಿಗೆ ಇದ್ದೆವು. ಔತಣ ಕೂಟದಲ್ಲೂ ನಾವು 12 ಮಂದಿ ಸೇರಿದ್ದೇವೆ ಎಂದು ಹೇಳಿದರು.
Facebook Comments