ಇನ್ನೊಂದು ತಿಂಗಳಲ್ಲಿ ಮುನಿರತ್ನ ಸಚಿವರಾಗುವುದು ಪಕ್ಕಾ : ಎಂಟಿಬಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಜ.15-ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಬುಗೆಲೆದ್ದಿರುವ ಅಸಮಾಧಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಮನಗೊಳಿಸಿ ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ನೂತನ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ಶ್ರೀ ನಿರಂಜನಾಂದ ಪುರಿ ಮಹಾ ಸ್ವಾಮಿಗಳು ಕಾಗಿನೆಲೆ ಇವರ ನೇತೃತ್ವದಲ್ಲಿ ಕರ್ನಾಟಕ ಕುರುಬ ಸಂಘದ ಸಹಯೋಗದಲ್ಲಿ ಇಂದು 3 ಗಂಟೆಗೆ ಅರಂಬವಾಗುವ ಪಾದಯಾತ್ರೆಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ತುಮಕೂರಿಗೆ ಆಗಮಿಸಿದ ವೇಳೆ ಮಾತನಾಡಿದರು.

ಒಂದು ತಿಂಗಳ ನಂತರ ಆರ್ ಆರ್ ನಗರದ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಮುನಿರತ್ನ ಅವರು ಇನ್ನು ಒಂದು ತಿಂಗಳ ನಂತರ ಸಚಿವರಾಗೋದು ಪಕ್ಕ ಇದರ ಬಗ್ಗೆ ಅನುಮಾನಗಳು ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ನನಗೆ ಸಚಿವ ಸಂಪುಟದಲ್ಲಿ ಯಾವ ಸಚಿವ ಸ್ಥಾನವನ್ನು ನೀಡಿದರು ಕೆಲಸ ಮಾಡುತ್ತೇನೆ,ನನಗೆ ಉತ್ತಮ ಖಾತೆಯನ್ನು ಮುಖ್ಯಮಂತ್ರಿ ಗಳಾದ ಬಿ ಎಸ್ ಯಡಿಯೂರಪ್ಪ ಅವರು ಹಾಗೂ ಹೈಕಮಾಂಡ್ ನವರು ನೀಡಲಿದೆ ಎಂದರು.

ಹಳ್ಳಿ ಹಕ್ಕಿ ವಿಶ್ವನಾಥ್ ಅವರು ಮೂಲೆಗುಂಪು ಆದರಾ.. ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಿಶ್ವನಾಥ್ ಬೇಸರದಿಂದ ಮಾತನಾಡಿದ್ದಾರೆ ಚುನಾವಣೆಯಲ್ಲಿ ಸೋತಿರುವ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಹಲವು ಅವಕಾಶಗಳು ಇವೆ ಆದರೆ ಅವರು ದುಡುಕುತ್ತಿದ್ದಾರೆ ಎಂದು ಹೇಳುವ ಮೂಲಕ ವಿಶ್ವನಾಥ್ ಅವರ ಬಗ್ಗೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದರು.

# ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲ:
ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಹಾಗೂ ಪಾದಯಾತ್ರೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಬೆಂಬಲ ಇದೆ ನಮ್ಮ ಈ ಹೋರಾಟಕ್ಕೆ ಜಯಸಿಗಲಿ ಎಂದು ಈ ಹೋರಾಟಕ್ಕೆ ಸಿಗಲಿದೆ ಎಂದು ಎಂ ಟಿ ಬಿ ನಾಗರಾಜ್ ತಿಳಿಸಿದರು. ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯಿಸಿ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.  ಮಾಜಿ ಸಚಿವ ರೇವಣ್ಣ, ಮುಕಡಪ್ಪ,ಶಾಂತಪ್ಪ, ಪುಟ್ಟಸ್ವಾಮಿ, ಸೇರಿದಂತೆ ಇತರರು ಇದ್ದರು.

 

Facebook Comments