ಡಿಜೆಹಳ್ಳಿ ಗಲಭೆ ಸಂಚುಕೋರ ಮುದಾಸೀರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.12- ಗಲಭೆಕೋರರನ್ನು ದಾಂಧಲೆಗೆ ಪ್ರಚೋದಿಸಿದ್ದೇ ಈತ…! ಹೆಸರು ಮುದಾಸೀರ್ ಅಹಮ್ಮದ್. ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಗಲಭೆಯ ಹಿಂದೆ ಈತನ ಕೈವಾಡವಿರುವುದು ಇದೀಗ ಬಹಿರಂಗಗೊಂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೆಂಬಲಿಗರು ಹಾಗೂ ಗಲಭೆಕೋರರನ್ನು ದಾಂಧಲೆ ನಡೆಸಲು ಡಿಜೆಹಳ್ಳಿಗೆ ಆಗಮಿಸುವಂತೆ ಮನವಿ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಯಾವಾಗ ಗಲಭೆ ವಿಪರೀತಕ್ಕೆ ಹೋಯಿತೋ ತಕ್ಷಣ ಮುದಾಸೀರ್ ಸಾಮಾಜಿಕ ಜಾಲತಾಣದಿಂದ ಎಕ್ಸಿಟ್ ಆಗಿದ್ದಾನೆ. ಆದರೆ ಆತ ಸಾಮಾಜಿಕ ಜಾಲತಾಣದಲ್ಲಿ ಗಲಭೆಕೋರರನ್ನು ಡಿಜೆಹಳ್ಳಿಗೆ ಆಗಮಿಸುವಂತೆ ಕರೆ ನೀಡಿರುವ ಪೋಸ್ಟ್ ಬಹಿರಂಗಗೊಂಡಿದೆ.

ಗಲಭೆ ನಂತರ ತಲೆಮರೆಸಿಕೊಂಡಿರುವ ಮುದಾಸೀರ್ ಅಹಮ್ಮದ್ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.

Facebook Comments

Sri Raghav

Admin