ರೇಪ್‍ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದ ಮಹಿಳೆ ಮರ್ಡರ್..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಜ.14- ಕಳೆದ ಡಿಸೆಂಬರ್ 30ರಂದು ಸಿಎಸ್‍ಪುರ ವ್ಯಾಪ್ತಿಯಲ್ಲಿ ಪತ್ತೆಯಾದ ಅಪರಿಚಿತ ಮಹಿಳೆಯ ಶವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.  ಆರೋಪಿಯಿಂದ ಪಡೆದಿದ್ದ ನಾಲ್ಕು ಲಕ್ಷ ಹಣವನ್ನು ವಾಪಸ್ ಕೊಡದೆ ರೇಪ್ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದ ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ದು ಆಕೆಯ ದುಪ್ಪಟ್ಟದಿಂದ ಕತ್ತು ಬಿಗಿದು ಕೊಲೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಆರೋಪಿ ಮೊಹಮ್ಮದ್ ರೆಹಮಾನ್ ಮೂಲತಃ ಬಿಹಾರದವನಾಗಿದ್ದು, 10 ವರ್ಷದ ಹಿಂದೆ ತುಮಕೂರಿಗೆ ಬಂದು ಮಂಜು ನಾಥನಗರದಲ್ಲಿ ವಾಸವಿದ್ದನು. ಈ ಸಂದರ್ಭದಲ್ಲಿ ಜಯನಗರ ಬಡಾವಣೆಯಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಮಧುಕುಮಾರಿ ಜೊತೆ ಸಲಹೆಯಿಂದ ಇದ್ದು, ನಾಲ್ಕು ಲಕ್ಷವನ್ನು ಸಾಲವಾಗಿ ನೀಡಿದ್ದನು. ಸಾಲದ ಹಣದ ವಾಪಸ್ ಕೇಳಿದರೆ ರೇಪ್ ಕೇಸ್ ಹಾಕಿ ಜೈಲಿಗೆ ಕಳುಹಿಸುವುದಾಗಿ ಮೊಹಮ್ಮದ್‍ಗೆ ಬೆದರಿಕೆ ಹಾಕಿದ್ದಳು.

ಇದರಿಂದ ಕೋಪಗೊಂಡಿದ್ದ ಮೊಹಮ್ಮದ್ ಕೊಲೆ ಮಾಡಲು ಸಂಚು ರೂಪಿಸಿ ಅದರಂತೆ ಡಿ.25ರಂದು ಸಂಜೆ ಕಾರಿನಲ್ಲಿ ಕರೆದೊಯ್ದು ಹಲವು ಕಡೆ ಸುತ್ತಾಡಿಸಿ ನಂತರ ಸಿಎಸ್‍ಪುರದ ಅವರೇಹಳ್ಳಿ ಬಳಿ ಕಾರು ನಿಲ್ಲಿಸಿ ಮಧುಕುಮಾರಿಯನ್ನು ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಸರ್ಕಾರಿ ಗೋಮಾಳ ಜಾಗದಲ್ಲಿ ಶವ ಬಿಸಾಕಿ ಪರಾರಿಯಾಗಿದ್ದನು. ಡಿ.30ರಂದು ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿತ್ತು. ಈಕೆಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ, ಬಡ್ಡಿ ವ್ಯವಹಾರ ನಡೆಸುತ್ತಿದ್ದ ಮಾಹಿತಿ ಲಭಿಸಿದೆ.

ಈ ಆಧಾರದ ಮೇಲೆ ಇವರ ಮನೆಗೆ ಯಾರ್ಯಾರು ಬರುತ್ತಿದ್ದರು, ಹಣಕಾಸು ವ್ಯವಹಾರ ಯಾರ ಜೊತೆ ಇತ್ತು ಎಂಬಿತ್ಯಾದಿ ಮಾಹಿತಿಯನ್ನು ಕಲೆಹಾಕಿ ಆರೋಪಿ ರೆಹಮಾನ್‍ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹಣ ಹಿಂದಿರುಗಿಸದೆ ನನಗೆ ಬೆದರಿಕೆ ಹಾಕುತ್ತಿದ್ದರಿಂದ ನಾನೇ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.

Facebook Comments