ಮುಜಾರಿಬಾ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿದ್ದರೆ ದೂರು ನೀಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.18- ಪ್ರೇಜರ್‍ ಟೌನ್‍ನ ಕೋಲ್ಸ್ ರಸ್ತೆಯಲ್ಲಿರುವ ಮುಜಾರಿಬಾ ಬುಲಿಯನ್ ಟ್ರೇಡಿಂಗ್ ಸಲ್ಯೂಷನ್ ಎಂಬ ಕಂಪನಿಯಲ್ಲಿ ಹಣ ತೊಡಗಿಸಿ ಮೋಸ ಹೋಗಿರುವ ಸಾರ್ವಜನಿಕರು ದಾಖಲಾತಿಗಳೊಂದಿಗೆ ಸಿಐಡಿ ಕಚೇರಿಗೆ ಬಂದು ಹೇಳಿಕೆ ನೀಡುವಂತೆ ತನಿಖಾಧಿಕಾರಿ, ಸಿಐಡಿ ಪೊಲೀಸ್ ಇನ್‍ಸ್ಪೆಕ್ಟರ್ ಟಿ.ಸೋಮಶೇಖರ್ ತಿಳಿಸಿದ್ದಾರೆ.
ಈ ಕಂಪನಿಯ ಸಾರ್ವಜನಿಕರಿಗೆ ಹೆಚ್ಚಿನ ಲಾಭಾಂಶ ನೀಡುವುದಕ್ಕಾಗಿ ಹಣ ಪಡೆದು ಮೋಸ ಮಾಡಿರುವ ಬಗ್ಗೆ ಪುಲಿಕೇಶಿನಗರ ಮತ್ತು ಜೆಸಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಾಲಿ ಸಿಐಡಿ ಘಟಕದಲ್ಲಿ ತನಿಖೆಯಲ್ಲಿದೆ.

ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅಸಲು ಹಣದೊಂದಿಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಮೊಹಮ್ಮದ್ ರಿಯಾಜ್, ಅಹಮ್ಮದ್ ಫೈಜಾನ್, ಮೊಹಮ್ಮದ್ ಮುದಸಿರಪಾಷ, ಸಯ್ಯದ್ ತಬ್ರೇಜ್ ಅಹಮ್ಮದ್ ಎಂಬುವರು ಹಲವಾರು ಸ್ಕೀಮ್‍ಗಳನ್ನು ಪ್ರಾರಂಭಿಸಿ ಈ ಸ್ಕೀಮ್‍ಗಳಲ್ಲಿ ಹಣ ಹೂಡಿದರೆ ಶೇ.60ರಿಂದ 70ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ ಕಂಪನಿ ವತಿಯಿಂದ ಎಂಒಯು ಡಿಕ್ಲರೇಷನ್ ಸರ್ಟಿಫಿಕೆಟ್‍ಗಳನ್ನು ನೀಡಿದ್ದು, ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಾಪಸ್ ನೀಡದೆ ಮೋಸ ಮಾಡಿದ್ದು,

ಇವರುಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ನಿವೃತ್ತ ರೈಲ್ವೆ ನೌಕರ ಮೊಹಮ್ಮದ್ ಜಮೀಲ್ ಎಂಬುವರು ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಸಾರ್ವಜನಿಕರು ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದರೆ ದಾಖಲಾತಿಗಳಾದ ಎಂಒಯು, ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಕಂಪನಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಸಿಐಡಿ ಕಚೇರಿಗೆ ಬಂದು ಹೇಳಿಕೆ ನೀಡುವಂತೆ ತನಿಖಾಧಿಕಾರಿ ಸೋಮಶೇಖರ್ ಅವರು ಸೂಚಿಸಿದ್ದಾರೆ.

Facebook Comments