ಮಲ್ಟಿಪ್ಲೆಕ್ಸ್ ಸಮೂಹ ಸಂಸ್ಥೆಯಿಂದ-ಆಕ್ಸಿಜ಼ನ್ ಕಾನ್ಸಂಟ್ರೇಟರ್ ಕೊಡುಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಜೂನ್ 8 : ಬೆಂಗಳೂರು ಮೂಲದ ಮಲ್ಟಿಪ್ಲೆಕ್ಸ್ ಸಮೂಹ ಸಂಸ್ಥೆಯು ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಬೆಂಗಳೂರು ಕೇಂದ್ರ ಕಾರಾಗೃಹದ ಆರೋಗ್ಯ ಕೇಂದ್ರಕ್ಕೆ ಮತ್ತು ತುಮಕೂರು ಜಿಲ್ಲಾಡಳಿತಕ್ಕೆ ತಲಾ 5 ಆಕ್ಸಿಜ಼ನ್ ಕಾನ್ಸಂಟ್ರೇಟರ್ ಗಳಂತೆ ಒಟ್ಟು 10 ಮಷಿನ್ ಗಳನ್ನು ನಿನ್ನೆ ಕೊಡುಗೆಯಾಗಿ ನೀಡಿದೆ.

ಬೆಂಗಳೂರು ಕೆಂದ್ರ ಕಾರಾಗೃಹದ ಮುಖ್ಯ ಅಧೀಕ್ಷರಾದ ಡಾ.ಪಿ.ರಂಗನಾಥ್ ಮಾತನಾಡಿ ಪ್ರಸ್ತುತ ಕೋವಿಡ್ ಮಹಾಮಾರಿ ನಿರ್ವಹಣೆಯಲ್ಲಿ ಅಗತ್ಯವಾಗಿ ಬೇಕಾದ ಆಕ್ಸಿಜ಼ನ್ ಕಾನ್ಸಂಟ್ರೇಟರ್ ಒದಗಿಸಿರುವುದು ಅತ್ಯಂತ ಸಂತೋಷದ ವಿಷಯವಾಗಿದ್ದು, ಇದಕ್ಕಾಗಿ ಮಲ್ಟಿಪ್ಲೆಕ್ಸ್ ಸಂಸ್ಥೆಗೆ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾರಾಗೃಹ ಆರೋಗ್ಯ ಕೇಂದ್ರದ ಮುಖ್ಯ ಆರೋಗ್ಯಾಧಿಕಾರಿ ಡಾ.ಉಮಾ, ಅಧೀಕ್ಷಕರಾದ ಶ್ರೀಮತಿ ಲತಾ, ವೈದ್ಯಾಧಿಕಾರಿ ಡಾ. ಸಂತೋಷ್, ಡಾ. ಪ್ರಮೀಳಾ, ಸಹಾಯಕ ಅಧೀಕ್ಷಕರಾದ ಪರಮೇಶ್, ಮಹದೇವನಾಯಕ್, ಶ್ರೀಶೈಲ ಮೇಟಿ ಉಪಸ್ಥಿತರಿದ್ದರು.

Facebook Comments