ಮುಂಬೈಗೆ ಬಂತು 1.39 ಲಕ್ಷ ಕೋವಿಡ್ ಲಸಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜ.13- ದೇಶದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳಲ್ಲಿ ದಾಖಲೆ ನಿರ್ಮಿಸಿದ್ದ ಮುಂಬೈ ಮಹಾನಗರ ಬುಧವಾರ ಒಂದು ಲಕ್ಷ 39 ಸಾವಿರ ಆಕ್ಸ್‍ಫರ್ಡ್ ಕೋವಿಡ್-19ನ ಕೋವಿಶೀಲ್ಡ್ ಲಸಿಕೆಗಳನ್ನು ಪಡೆದಿದೆ. ಪುಣೆ ಮೂಲಕ ಸೀರಮ್ ಇನ್ಸ್‍ಟಿಟ್ಯೂಟ್ ಆಫ್ ಇಂಡಿಯಾ (ಎಸ್‍ಐಐ) ಕೋವಿಶೀಲ್ಡ್ ಲಸಿಕೆಯನ್ನು ಬೃಹನ್ ಮುಂಬೈ ಮುನಿಸಿಪಲ್ ಕಾಪೆರ್ರೇಷನ್ (ಬಿಎಂಸಿ) ತಲುಪಿಸಿದೆ. ಲಸಿಕೆ ಹೊತ್ತ ವಾಹನಗಳನ್ನು ಇಂದು ಬೆಳಗ್ಗೆ ಬಿಎಂಸಿ ಬರಮಾಡಿಕೊಂಡಿದೆ.

ಮೊದಲ ಬ್ಯಾಚ್‍ನ 1.39 ಲಕ್ಷ ಲಸಿಕೆಯನ್ನು ನಗರದಾದ್ಯಂತ ಇರುವ ವ್ಯಾಕ್ಸಿನೇಷನ್ ಸೆಂಟರ್‍ಗಳಿಗೆ ಪೂರೈಸಿ, ಲಸಿಕೆ ಪ್ರಯೋಗ (ಇನಾಕ್ಯೂಲೇಷನ್ ಡ್ರೈವ್) ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜ.16ರಿಂದ ಈ ಕಾರ್ಯಕ್ರಮ ಆರಂಭವಾಗಲಿದೆ ಎಂದು ಬಿಎಂಸಿ ಮೂಲಗಳು ಪ್ರಕಟಿಸಿವೆ.

1 ಲಕ್ಷ 39 ಸಾವಿರದ ಐನೂರು ಕೋವಿಶೀಲ್ಡ್ ಲಸಿಕೆಗಳನ್ನು ಪುಣೆ ಪೊಲೀಸ್ ಸಹಯೋಗದಲ್ಲಿ ಎಸ್‍ಐಐ ವಾಹನಗಳಲ್ಲಿ ಪೂರೈಸಿದೆ. ವ್ಯಾಕ್ಸಿನ್ ಹೊತ್ತ ಎರಡು ವಾಹನಗಳನ್ನು ಬರ ಮಾಡಿಕೊಂಡಿದ್ದೇವೆ ಎಂದು ಬಿಎಂಸಿ ತಿಳಿಸಿದೆ.

ಕಂಜುರ್‍ಮಾರ್ಗ್‍ನಲ್ಲಿ ವ್ಯಾಕ್ಸಿನ್ ಸ್ಟೋರೇಜ್ ಮಾಡಲಾಗುವುದು. ಈಗಾಗಲೇ 1 ಲಕ್ಷ 30 ಸಾವಿರ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ನೋಂದಾಯಿಸಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.

Facebook Comments