ಎಂಆರ್‌ಪಿಗಿಂತ 10ರೂ. ಅಧಿಕ ಬೆಲೆಗೆ ಐಎಸ್‍ಕ್ರೀಂ ಮಾರುತ್ತಿದ್ದ ರೆಸ್ಟೋರೆಂಟ್‍ಗೆ 2 ಲಕ್ಷ ದಂಡ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಆಗಸ್ಟ್.28- ಎಂಆರ್‍ಪಿಗಿಂತ ಅಧಿಕ ಬೆಲೆಗೆ ಐಎಸ್‍ಕ್ರೀಂ ಮಾರಾಟ ಮಾಡುತ್ತಿದ್ದ ರೆಸ್ಟೋರೆಂಟ್ ಮಾಲೀಕನಿಗೆ ಗ್ರಾಹಕರ ವೇದಿಕೆಯು 2 ಲಕ್ಷ ರೂ. ದಂಡ ವಿಧಿಸಿ ಕೂಡಲೇ ದಂಡದ ಹಣವನ್ನು ಕಟ್ಟುವಂತೆ ಸೂಚನೆ ನೀಡಿದೆ.

ಎಮ್‍ಆರ್‍ಪಿ ಬೆಲೆಗಿಂತ ಐಸ್‍ಕ್ರೀಮ್‍ಗೆ 10 ರೂ.ಗಳ ಅಧಿಕ ಶುಲ್ಕ ವಿಸುತ್ತಿದ್ದ ರೆಸ್ಟೋರೆಂಟ್ ಈಗ ಭಾರೀ ದಂಡ ತೆತ್ತುವಂತಾಗಿದೆ. ಶಗುನ್ ವೆಜ್ ರೆಸ್ಟೋರೆಂಟ್ ಎಂಆರ್‍ಪಿ ಬೆಲೆ 165 ರೂ. ಬೆಲೆಗಿಂತ ಹೆಚ್ಚುವರಿಯಾಗಿ 10 ವಿಧಿಸಿ 175 ರೂ.ಗಳಿಗೆ ಐಸ್ಕ್ರೀಮ್ ಮಾರಾಟ ಮಾಡಿದ್ದಾರೆ.

ಈ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಈಗ ಕ್ರಮ ಕೈಗೊಂಡಿರುವ ಗ್ರಾಹಕರ ವೇದಿಕೆಯೂ ಎಂಆರ್‍ಪಿಗಿಂತ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸರಿಯಲ್ಲ ಎಂದು ತಿಳಿಸಿದೆ.

ಸುಮಾರು 24 ವರ್ಷಗಳಿಂದ ಇದೇ ರೀತಿ ಗ್ರಾಹಕರ ಮೇಲೆ ಹೆಚ್ಚಿನ ಶುಲ್ಕ ವಿಧಿಸಿ ದೈನಂದಿನ ಗಳಿಕೆಯ ಆಧಾರದಲ್ಲಿ 40,000- 50,000 ರೂ.ಗಳನ್ನು ಗಳಿಸುವ ಮೂಲಕ ಲಾಭ ಗಳಿಸಲಾಗಿದೆ. ಅನ್ಯಾಯದ ವ್ಯಾಪಾರವನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದೆ.

ಅನ್ಯಾಯದ ವ್ಯಾಪಾರವನ್ನು ನಿಗ್ರಹಿಸಲು ಹಾಗೂ ಗ್ರಾಹಕರಿಗೆ ಆಗುವ ವಂಚನೆ ಮತ್ತು ನಷ್ಟವನ್ನು ತಪ್ಪಿಸಲು ವೇದಿಕೆಯು ಈಗ ರೆಸ್ಟೋರೆಂಟ್‍ನವರಿಗೆ ಬರೋಬ್ಬರಿ 2 ಲಕ್ಷ ರೂ.ಗಳನ್ನು ದಂಡ ವಿಧಿಸಿದೆ.
ಅಂಗಡಿಗಳು ಮತ್ತು ರೆಸ್ಟೋರೆಂಟ್ ಗಳಿಗು ವ್ಯತ್ಯಾಸವಿದೆ.

ಐಸ್‍ಕ್ರೀಮ್ ಸಂಗ್ರಹಿಸಲು ತಗಲುವ ವೆಚ್ಚ, ಬರುವ ಗ್ರಾಹಕರು ಕುಡಿಯಲು ನೀರು ಕೇಳುತ್ತಾರೆ, ಕೂರಲು ಪೀಠೋಪಕರಣಗಳನ್ನು ಬಳಸುವುದು, ಐಸ್‍ಕ್ರೀಮ್ ಗೆ ಕಟ್ಲರಿಗಳನ್ನು ಬಳಸುವುದು ಮುಂತಾದ ಸೇವೆಯನ್ನೂ ಒದಗಿಸುತ್ತೇವೆ ಎಂದು ಸಮರ್ಥಿಸಿಕೊಂಡು, ಇದನ್ನು ಹೆಚ್ಚುವರಿ ಶುಲ್ಕ ಎಂದು ಆರೋಪಿಸಿದರೆ ಹೇಗೆ ಎಂದು ರೆಸ್ಟೋರೆಂಟ್ ಮಾಲೀಕರು ಆಕ್ಷೇಪಿಸಿದ್ದಾರೆ.

Facebook Comments

Sri Raghav

Admin