ಮುಂಬೈನಲ್ಲಿ ಕಟ್ಟಡವೊಂದರಲ್ಲಿ ಅಗ್ನಿ ದುರಂತ, ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

mumbaiಮುಂಬೈ(ಪಿಟಿಐ), ನ.14- ಮುಂಬೈನ ಕೊಳಗೇರಿ ಪುನರ್ವಸತಿ ಪ್ರಾಧಿಕಾರ (ಎಸ್‍ಆರ್‍ಎ)ದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.  ಅಂಧೇರಿ ಪಶ್ಚಿಮದ ಓಬೆರಾಯ್ ಟವರ್ ಬಳಿ ಇರುವ ಕದಂ ಚಾವ್ಲಾ ಎಸ್‍ಆರ್‍ಎ ಕಟ್ಟಡದ 10 ಮತ್ತು 11ನೆ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದು, ಕಟ್ಟಡದಿಂದ ಮೂವರನ್ನು ರಕ್ಷಿಸಲಾಗಿದೆ ಎಂದು ಬಿಎಂಸಿಯ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.ಕಟ್ಟಡದ ಇತರೆ ಮಹಡಿಗಳಲ್ಲಿ ರುವ ಜನರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ.

Facebook Comments