ಮುಂಬೈ ಮ್ಯಾರಥಾನ್‍ನಲ್ಲಿ ವೃದ್ಧ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜ. 19- ಮ್ಯಾರಥಾನ್ ವೇಳೆ ಹೃದಯ ಸ್ತಂಭನ (ಹಾರ್ಟ್ ಅಟ್ಯಾಕ್) ಆಗಿ ವೃದ್ಧನೊಬ್ಬ ಮೃತಪಟ್ಟರೆ, ಇನ್ನು ಇಬ್ಬರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಇಂದು ಮುಂಜಾನೆ 5.15ಕ್ಕೆ ಹಮ್ಮಿಕೊಂಡಿದ್ದ 4 ಕಿಲೋಮೀಟರ್‍ಗಳ ಮುಂಬೈ ಮ್ಯಾರಾಥಾನ್‍ನಲ್ಲಿ ಪಾಲ್ಗೊಂಡಿದ್ದ ಗಜಾನನ್ ಮಲ್ಕಾಜರ್ (64)ರವರು ಕುಸಿದು ಬಿದ್ದಿದ್ದಾರೆ, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ಸಾಗಿಸಿದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮ್ಯಾರಾಥಾನ್‍ನಲ್ಲಿ ಪಾಲ್ಗೊಂಡಿದ್ದ ಹಿಮಾನ್‍ಶು ತಕ್ಕರ್ (40) ಅವರು ಕೂಡ ಕುಸಿದು ಬಿದ್ದಿದ್ದು ಅವರನ್ನು ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಪಡಿಸಿದ್ದರೆ, ಮತ್ತಿಬ್ಬರು ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ನಡೆದ 10 ಕೆ ಮ್ಯಾರಾಥಾನ್ ಅನ್ನು ಛತ್ರಪತಿ ಶಿವಾಜಿ ಮಹಾರಾಜ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು, ನಗರದ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

Facebook Comments