ಮುಂಬೈ ಪೊಲೀಸರ ಬಲೆಗೆ ಬಿದ್ದ ಹವಾಲಾ ಆರೋಪಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಅ.21-ಮಾಜಿ ಪೊಲೀಸ್ ಆಯುಕ್ತ ಪರಮ್‍ಬಿರ್ ಸಿಂಗ್ ವಿರುದ್ಧ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ಹವಾಲಾ ರೂವಾರಿಯೊಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಗುಜರಾತ್‍ಗೆ ತೆರಳಿದ್ದ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್‍ನ ಪೊಲೀಸರು ಅಲ್ಲಿನ ಮೆಹಸಾನ್‍ದಲ್ಲಿ ತಲೆಮರೆಸಿಕೊಂಡಿದ್ದ ಅಲ್ಪೇಶ್ ಪಟೇಲ್ ಅವರನ್ನು ತಡರಾತ್ರಿ ಬಂಧಿಸಿ ಮುಂಬೈಗೆ ಕರೆತಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪರಮ್‍ಬಿರ್ ವಿರುದ್ಧ ದಾಖಲಾದ ಸುಲಿಗೆ ಪ್ರಕರಣದ ತನಿಖೆ ನಡೆಸಿದಾಗ ಅಲ್ಪೇಶ್ ಹವಾಲಾ ಮೂಲಕ ಕೋಟ್ಯಂತರ ರೂ.ವಹಿವಾಟು ನಡೆಸಿರುವುದು ಪತ್ತೆಯಾಗಿರುವುದರಿಂದ ಆತನನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಮಾಜಿ ಗೃಹ ಸಚಿವ ಅನಿಲ್ ದೇಶ್‍ಮುಖ್ ವಿರುದ್ಧ ತಿರುಗಿಬಿದ್ದಿದ್ದ ಪರಮ್‍ಬೀರ್ ಸಿಂಗ್ ವಿರುದ್ಧ ಮುಂಬೈ, ಥಾಣೆ ಸೇರಿದಂತೆ ಹಲವಾರು ಪೊಲೀಸ್ ಠಾಣೆಗಳಲ್ಲಿ ಸುಲಿಗೆ ಪ್ರಕರಣ ದಾಖಲಿಸಲಾಗಿತ್ತು.

Facebook Comments