ವಾಣಿಜ್ಯ ನಗರಿ ಮುಂಬೈನಲ್ಲಿ ನಿಲ್ಲದ ವರುಣಾರ್ಭಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು , ಆ.7- ಮಹಾ ಮಳೆಗೆ ಕೇವಲ ಕಾರ್ನಾಟಕ ಮಾತ್ರ ವಲ್ಲಾ, ಮುಂಬೈಕೂಡ ಮುಳುಗಡೆ ಯಾಗಿರುವಂತಹುದು, ಆ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು, ದುರುಂತ ನೋಡಿ ಒಂದು ಕಡೆ ಕೊರೊನಾ ಆರ್ಭಟವಾದ್ರೆ, ಮಗದೊಂದು ಕಡೆ ವರುಣನ ರುದ್ರನರ್ತನ ಜನರನ್ನು ಇನ್ನಿಲ್ಲದಂತೆ ಹೈರಾಣಾಗಿಸಿದೆ. ಯಾಕೀ ಮಾತನ್ನು ಹೇಳ್ತಾ ಇದೀವಿ ಅಂದ್ರೆ ಈ ದೃಶ್ಯಗಳಲ್ಲಿ ನೀವು ಕಾಣ್ತಾ ಇರಬಹುದು, ಕೊರೊನಾ ಪೇಶೆಂಟ್‌ಗಳನ್ನು ವೈದ್ಯರು ಕರೆದೊಯ್ಯುತ್ತಿದ್ದಾರೆ. ಆಸ್ಪತ್ರೆಗೂ ಕೂಡ ಮಳೆ ನೀರು ನುಗ್ಗಿರುವಂತಹುದು.

ಮತ್ತೊಂದು ದೃಶ್ಯ ನೀವು ವಿಡಿಯೋದಲ್ಲಿ ಕಾಣಬಹುದು. ಮನೆಗಳಿಗೆ ನುಗ್ಗಿರುವ ಮಹಾಮಳೆಗೆ ಸಿಕ್ಕಿ ತಮ್ಮ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಬಂದು ನಿಂತಿರುವಂತಹುದು, ಮಹಿಳೆಯೊಬ್ಬರು ವರುಣದೇವ ಕೃಪೆ ತೋರಿ ಶಾಂತನಾಗು ಎಂದು ನಿಂತಲ್ಲೇ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದಾರೆ.

ಇನ್ನೂ ಕಳೆದ ಎರಡು ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಹಾಮಳೆಗೆ ಮುಂಬೈನಗರ ಮುಳುಗಡೆಯಾಗುವಂತೆ ಕಾಣುತ್ತಿದೆ, ಒಂದೆಡೆ ಟ್ರಾಫಿಕ್ ಜಾಮ್ ಕಂಡು ಬಂದ್ರೆ ಮತ್ತೊಂದೆಡೆ ವಾಹನಗಳನ್ನು ವರುಣ ದೇವ ಆಹುತಿ ತೆಗೆದುಕೊಂಡಿದ್ದಾನೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಮಳೆ ಆರ್ಭಟ ಗುರುವಾರ ರಾತ್ರಿಯೂ ಮುಂದುವರಿದಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕೆಲವು ಪ್ರದೇಶಗಳಲ್ಲಿ ಅಬ್ಬರ ಕೊಂಚ ತಗ್ಗಿದ್ದರೂ ತಗ್ಗು ಪ್ರದೇಶಗಳಲ್ಲಿ ನಿಂತಿದ್ದ ನೀರು ಸರಾಗವಾಗಿ ಹರಿಯದೇ ದಿನವಿಡೀ ಜನರು ಪರದಾಡಿದರು. ಗಂಟೆಗೆ ೭೦-೮೦ ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.

ಹಲವು ಕಡೆ ಕುಡಿಯುವ ನೀರಿನ ಕೊಳವೆಗಳು ಒಡೆದು ಹೋಗಿವೆ. ರಸ್ತೆ ಹಾಗೂ ರೈಲು ಹಳಿ ಮಾರ್ಗಗಳು ನೀರಿನಲ್ಲಿ ಮುಳುಗಿದ್ದು ಬಸ್ ಹಾಗೂ ರೈಲು ಸಂಚಾರದಲ್ಲಿ ತೀವ್ರ ವ್ಯತ್ಯಯವಾಗಿದೆ. ೨೨ ವರ್ಷಗಳಲ್ಲಿಯೇ ಇದೊಂದು ದಾಖಲೆಯಾಗಿದೆ. ರತ್ನಗಿರಿ, ಸಿಂಧುದುರ್ಗ, ಪುಣೆ, ಕೊಲ್ಹಾಪುರ ಮತ್ತು ಸತಾರಾ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೊಲ್ಹಾಪುರದ ಪಂಚಗಂಗಾ ಸೇರಿ ಅನೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.

Facebook Comments