ನಗರಸಭೆ ಚುನಾವಣೆ : ಮೊದಲ ದಿನವೇ 80 ಅಭ್ಯರ್ಥಿಗಳ ನಾಮಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಅ.24- ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಅಸಕಿತ್ತ ಅಭ್ಯರ್ಥಿಗಳು ಮಾಡಿರುವ ಅರ್ಜಿ ನಮೂನೆಯಲ್ಲಿ ತಮ್ಮ ಹೆಸರು ವಿಳಾಸ ಭರ್ತಿಮಾಡಿ ಪಕದ ಕಚೇರಿಯಲ್ಲಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಮಂಜುನಾಥರೆಡ್ಡಿ ತಿಳಿಸಿದರು.

ನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಚುನಾವಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ನವೆಂಬರ್ 12 ರಂದು ನಡೆಯಲಿರುವ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸುವ ಅಭ್ಯರ್ಥಿಗಳು ಪಕ್ಷ ನಿಷ್ಥೆಗೆ ಬಧ್ದರಾಗಿ ಸಂಘಟನೆ ಮಾಡಲು ಮುಂದಾಗಿ ಹಾಗೂ ಪಕ್ಷ ಸೂಚಿಸುವ ಅಭ್ಯರ್ಥಿಗೆ ಬೆಂಬಲಿಸಿ ಯಾವುದೇ ಕಾರಣಕ್ಕೂ ಬಂಡಾಯ ಏಳದೇ ್ಮ ಪಕ್ಷದ ಅಭ್ಯರ್ಥಿಗಳ ಹೆಚ್ಚಿನ ಸಂಖ್ಯೆಯಲ್ಲಿ ಗೆಲವು ಸಾಧಿಸಲು ಶ್ರಮಿಸಿ ಎಂದು ಸಲಹೆ ಮಾಡಿದರು.

ಅರ್ಜಿ ಪರಿಶೀಲನೆಗೆ ಸಮಿತಿ: ಈ ಬಾರಿ ಯಾವುದೆ ಗೊಂದಲಕ್ಕೆ ಅವಕಾಶ ನೀಡದೇ ನಿಷ್ಠಾವಂತ ಅಭ್ಯರ್ಥಿ ಹಾಗೂ ಕಾರ್ಯಕರ್ತರನ್ನು ಅಯ್ಕೆ ಸಮಿತಿ ಮತ್ತು ಜನಾಭಿಪ್ರಾಯ ಆಧರಿಸಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಿದರು.

ಜೆಡಿಎಸ್ ಮುಖಂಡರಾದ ಸಿ.ಅರ್ ನರಸಿಂಹಮೂರ್ತಿ ಮಾತನಾಡಿ, ಈ ಬಾರಿ ನಗರ ಸಭೆಯ ಚುಕ್ಕಾಣಿ ಹಿಡಿಯಲು ಎಲ್ಲಾ ಕಾರ್ಯಕರ್ತರು ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಅಧಿಕಾರ ಸಿಗುವುದು ಖಚಿತ ಎಂದರು. ಈ ನಿಟ್ಟಿನಲ್ಲಿ ಸಣ್ಣ ಪುಟ್ಟ ಬಿನ್ನಾಭಿಪ್ರಾಯ ಬದಿಗೊತ್ತಿ, ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಎಂದು ತಿಳಿಸಿದರು.

ಸಭೆಯಲ್ಲಿ 80 ಹೆಚ್ಚು ಅಭ್ಯರ್ಥಿಗಳ ಅರ್ಜಿ ಬಂದಿರುವುದು ವಿಶೇಷವೆನಿಸಿದ್ದು ಅದರಲ್ಲಿ ಮಾದನಹಳ್ಳಿಗೆ ಹೆಚ್ಚು ಅಭ್ಯರ್ಥಿಗಳು ಅರ್ಜಿ ನೀಡಿರುವುದು ಪಕ್ಷದ ವರ್ಚಸ್ಸು ಹೆಚ್ಚಿದೆ ಎನ್ನಾಲಾಗಿದೆ.
ಸಭೆಯಲ್ಲಿ, ಮುಖಂಡರಾದ ಅಲ್ಲಂಪಲ್ಲಿ ವೇಣು, ಎಸ್. ಎಚ್. ಲಕ್ಷ್ಮೀನಾರಾಯಣ್, ಮಾಜಿ ನಗರಸಭೆ ಸzಸ್ಯ ಕೆಎಸ್ ಅನಂತರಾಜ್, ಜಿಕೆ ಸತೀಶ್ ,ಕರವೇ ಜಿಎಲ್ ಆಶ್ವತ್ಥ್ ನಾರಾಯಣ್, ಬಷೀರ್, ಸಲೀಮ್, ನಟರಾಜ್, ವೇಣು,ಭಾಸ್ಕರ್, ಜೂಲಪ್ಪ ,ಪದ್ಮವತಮ್ಮ ,ಮುಂತಾದವರು ಹಾಜರಿದ್ದರು.

Facebook Comments