ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ,ನ.5- ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕಾರಿನಿಂದ ಕಾರಿಗೆ ಡಿಕ್ಕಿ ಹೊಡೆದು ಸಿನೀಮಿಯ ಶೈಲಿಯಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಭೀಕರ ಘಟನೆ ಕಲಬುರಗಿ ಹೊರವಲಯದ ಸಿರಸಗಿ ಮಡಿ ಬಳಿ ತಡರಾತ್ರಿ ನಡೆದಿದೆ.

ಶಿವಲಿಂಗ್ ಕೊಲೆಯಾದ ವ್ಯಕ್ತಿ. ಶಿವಲಿಂಗ್ ಕೊಲೆಯ ಹಿಂದೆ ಕಾಂಗ್ರೆಸ್ ಜಿಲ್ಲಾ ಪಂಚಾಯ್ತಿ ಸದಸ್ಯ ಶಾಂತಪ್ಪ ಕೂಡಲಗಿ ಸೇರಿದಂತೆ ಹಲವರ ಕೈವಾಡ ಇದೆ ಎಂದು ಶಿವಲಿಂಗ್ ಸಂಬಂಧಿಕರು ಆರೋಪಿಸಿದ್ದಾರೆ. ಇತ್ತೀಚೆಗೆ ಗ್ರಾಮದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕೊಲೆಯಾದ ಶಿವಲಿಂಗ್ ಜೈಲಿಗೆ ಹೋಗಿ ನಿನ್ನೆಯಷ್ಟೇ ಜಮೀನಿನ ಮೇಲೆ ಬಂದಿದ್ದರು. ಈ ವಿಷಯ ತಿಳಿದ ದುಷ್ಕರ್ಮಿಗಳು ಶಿವಲಿಂಗ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

ಈ ಕುರಿತು ಫರ್ತಾಬಾದ್ ಪೊಲೀಸ್ ಠಾಣೆಯಲ್ಲಿ ಶಾಂತಪ್ಪ ಕೂಡಲಗಿ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ.

Facebook Comments