ಆಸ್ತಿ ವಿವಾದ : ಅಣ್ಣನನ್ನೇ ಕೊಂದ ತಮ್ಮ

ಈ ಸುದ್ದಿಯನ್ನು ಶೇರ್ ಮಾಡಿ

ಹರಪನಹಳ್ಳಿ, ಜೂ.29- ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಮ್ಮನೇ ಅಣ್ಣನನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ತಾಲೂಕಿನ ಎರಡೆತ್ತಿನಹಳ್ಳಿಯಲ್ಲಿ ನಡೆದಿದೆ. ಹಾಲೇಶ್ (40) ಕೊಲೆಯಾದ ದುರ್ದೈವಿ. ಹೊನ್ನಪ್ಪ (38) ಹತ್ಯೆಗೈದು ಆರೋಪಿಯಾದ ಆರೋಪಿ.

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಣ್ಣತಮ್ಮಂದಿರ ನಡುವೆ ಹಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಜಗಳ ವಿಕೋಪಕ್ಕೆ ಹೋಗಿ ಮಾರಕಾಸ್ತ್ರಗಳಿಂದ ಹೊನ್ನಪ್ಪ ಹಾಲೇಶ್‍ನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಹರಪನಹಳ್ಳಿ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Facebook Comments