ಹಾರೆಯಿಂದ ಹೊಡೆದು ಪತ್ನಿ ಕೊಲೆ: ಪತಿಯೂ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು,ಆ.11- ಪಾನಮತ್ತನಾಗಿದ್ದ ಪತಿ ನಿದ್ರೆಯಲ್ಲಿದ್ದ ಹೆಂಡತಿಯನ್ನು ಹಾರೆಯಿಂದ ಬಡಿದು ಕೊಲೆ ಮಾಡಿ, ತಾನೂ ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಲ್ಲಂಪುರ ಬಡಾವಣೆಯಲ್ಲಿ ನಡೆದಿದೆ.  ರತ್ಮಮ್ಮ(48) ಪತಿಯಿಂದಲೇ ಹತ್ಯೆಗೀಡಾದ ಪತ್ನಿ.

ಸಿದ್ದಪ್ಪಶೆಟ್ಟಿ(62) ಮದ್ಯವ್ಯಸನಿಯಾಗಿದ್ದು, ರಾತ್ರಿ ಕುಡಿದ ಅಮಲಿನಲ್ಲಿ ರತ್ನಮ್ಮನನ್ನು ಹಾರೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಸ್ನಾನದ ಮನೆಗೆ ತೆರಳು ತಾನೂ ಆಸೀಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Facebook Comments