ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತನನ್ನು ಕೊಂದಿದ್ದವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.15- ಮದ್ಯಪಾನದ ವೇಳೆ ಇಬ್ಬರು ಜಗಳವಾಡಿಕೊಂಡು ಬಾಟಲಿಯಿಂದ ಕುತ್ತಿಗೆಗೆ ಚುಚ್ಚಿ ಸ್ನೇಹಿತನ ಕೊಲೆ ಮಾಡಿದ್ದ ಮೂವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂದೀಪ್, ಕೃಷ್ಣಮುರ್ತಿ, ರೇವಣ್ಣ ಬಂಧಿತರು. ಮೇ 31 ರಂದು ರಾತ್ರಿ ಮಣಿ ಅಲಿಯಾಸ್ ಮಣಿಕಂಠ (26) ಎಂಬಾತ ತನ್ನ ಸ್ನೇಹಿತರೊಂದಿಗೆ ಕೆಂಗೇರಿ, ಉತ್ತರಹಳ್ಳಿ ರಸ್ತೆ ಆಶ್ರಮದ ಎದುರು ಮನೆ ಸಾವನ್ ದರ್ಬಾರ್ ಕಟ್ಟಡವೊಂದರ ಎರಡನೇ ಮಹಡಿಯಲ್ಲಿ ಕೃಷ್ಣಮೂರ್ತಿ ಅಲಿಯಾಸ್ ಬಿರಿಯಾನಿ ಜೊತೆ ಮದ್ಯಪಾನ ಮಾಡುತ್ತಿದ್ದನು.

ಈ ಸಂದರ್ಭದಲ್ಲಿ ನೀನು ಜಾಸ್ತಿ ಮದ್ಯ ಸೇವಿಸಿದೆ ಎಂದು ಒಬ್ಬರಿಗೊಬ್ಬರು ಜಗಳವಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ಸಂದೀಪ್, ಕೃಷ್ಣಮೂರ್ತಿ, ರೇವಣ್ಣ ಮತ್ತಿತರರು ಸೇರಿಕೊಂಡು ಮದ್ಯದ ಬಾಟಲಿನ ಚೂಪಾದ ಜಾಗದಿಂದ ಮಣಿಕಂಠನ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments