ಊಟದ ವಿಚಾರಕ್ಕೆ ಜಗಳ, ಗಾಜಿನ ಚೂರಿನಿಂದ ಚುಚ್ಚಿ ಯುವಕನ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.18- ಊಟದ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಗಾಜಿನ ಚೂರಿನಿಂದ ಚುಚ್ಚಿ ಯುವಕನ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ನಸೀಮ್ ಅಲಿಯಾಸ್ ಆಸೀಫ್ (19) ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಕಬಾಬ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಸೀಮ್ ಕಳೆದ 16ರಂದು ರಾತ್ರಿ ಊಟದ ವಿಚಾರವಾಗಿ ಸ್ನೇಹಿತನ ಜತೆ ಜಗಳವಾಡಿಕೊಂಡಿದ್ದನು.

ಬಿ.ಚನ್ನಸಂದ್ರದ ಕಾರ್ತಿಕ್ ಬಾರ್ ಬಳಿ ಅಂದು ಗಾಜಿನ ಚೂರಿನಿಂದ ನಸೀಮ್ ಹೊಟ್ಟೆಗೆ ಚುಚ್ಚಿ ಸ್ನೇಹಿತ ಪರಾರಿಯಾಗಿದ್ದನು. ಗಂಭೀರ ಗಾಯಗೊಂಡಿದ್ದ ನಸೀಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ, ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಈ ಬಗ್ಗೆ ರಾಮಮೂರ್ತಿ ನಗರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments