ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ಯುವಕನ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.28- ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ತಳ್ಳಾಟ-ನೂಕಾಟದ ವೇಳೆ ಯುವಕನೊಬ್ಬ ಕೊಲೆಯಾಗಿರುವ ಘಟನೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಗಡೆ ನಗರದ ನಿವಾಸಿ ಇರ್ಫಾನ್ (29) ಕೊಲೆಯಾದ ಯುವಕ. ನಿನ್ನೆ ಸಂಜೆ 5.30ರಲ್ಲಿ ರೋಸ್ ಗಾರ್ಡನ್ ಬಸ್ ನಿಲ್ದಾಣ ಸಮೀಪ ಗೋಪಿ ಎಂಬುವರು ಇರುವ ವಿಷಯ ತಿಳಿದು ಇರ್ಫಾನ್ ಮತ್ತು ಪುನೀತ್ ಆ ಸ್ಥಳಕ್ಕೆ ಹೋಗಿ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದಾರೆ.

ಈ ವಿಷಯ ಗೋಪಿ ಅವರ ಮಕ್ಕಳಿಗೆ ಮತ್ತು ಸ್ನೇಹಿತರು ಸಾರ್ವಜನಿಕರಿಗೆ ತಿಳಿದು ಸ್ಥಳಕ್ಕೆ ಬಂದು ಇರ್ಫಾನ್ ಮತ್ತು ಪುನೀತ್‍ಗೆ ಕೈಗಳಿಂದ ಹಲ್ಲೆ ಮಾಡಿ ತಳ್ಳಾಡಿದ್ದಾರೆ. ಈ ವೇಳೆ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಇರ್ಫಾನ್‍ನನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ತಳ್ಳಾಟದಲ್ಲಿ ಗಾಯಗೊಂಡಿದ್ದ ಪುನೀತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ವಿವೇಕನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments