ತಂದೆಯ ಮೇಲಿನ ದ್ವೇಷಕ್ಕೆ ಮಗನ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.11- ತಂದೆ ಮೇಲಿನ ದ್ವೇಷಕ್ಕೆ ಅವರ ಮಗನನ್ನೇ ಕೊಲೆ ಮಾಡಿರುವ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೊಂಬೇಗೌಡ ನಗರದ ಸ್ಲಂ ಬಳಿ ಆಕಾಶ್ (20) ಎಂಬಾತನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿನಲ್ಲಿ ಐದಾರು ಮಂದಿಯ ಗುಂಪು ಚಾಕು ಮತ್ತು ಲಾಂಗ್ ಹಿಡಿದುಕೊಂಡು ಹೊಂಬೇಗೌಡ ನಗರ ಸ್ಲಂ ಬಳಿ ಬಂದಿದ್ದಾರೆ.

ಈ ವೇಳೆ ಆಕಾಶ್ ಎದುರಿಗೆ ಸಿಕ್ಕಿದ್ದಾನೆ. ನಿಮ್ಮ ತಂದೆ ಎಲ್ಲಿ ಎಂದು ದುಷ್ಕರ್ಮಿಗಳು ಕೇಳಿದಾಗ ಮನೆಯಲ್ಲಿಲ್ಲ ಎಂದು ಆತ ಹೇಳಿದ್ದಾನೆ. ಮೊದಲೇ ಕೋಪಗೊಂಡಿದ್ದ ದುಷ್ಕರ್ಮಿಗಳು ಅವರ ತಂದೆ ಸಿಗಲಿಲ್ಲವೆಂದು ಆಕಾಶನಿಗೆ ಚಾಕುವಿನಿಂದ ಇರಿದು ಲಾಂಗ್‍ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ತಕ್ಷಣ ಈತನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಸಿದ್ದಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

Facebook Comments