ಅಕ್ರಮ ಸಂಬಂಧಕ್ಕಾಗಿ ಬಾಲಕನ ಕೊಲೆ : ಆರೋಪಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು,ಮಾ.30- ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹಿಂದಿದ್ದ ವ್ಯಕ್ತಿ ಆಕೆಯೊಂದಿಗೆ ಭಿನ್ನಾಭಿಪ್ರಾಯ ಹೊಂದಿ ಆಕೆಯ ಆರು ವರ್ಷದ ಮಗನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ತಾಲ್ಲೂಕಿನ ನಗರಗೆರೆ ಹೋಬಳಿಯ ವಾಟದಹೊಸಹಳ್ಳಿ ಗ್ರಾಮದ ರಾಮಾಂಜಿ ಎಂಬಾತನನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಾಟದಹೊಸಹಳ್ಳಿ ಗ್ರಾಮದ ಪ್ರಭಾವತಿ ಮತ್ತು ನಾರಾಯಣಸ್ವಾಮಿ ದಂಪತಿ ಪುತ್ರ ವಿಷ್ಣುವರ್ಧನ್ (6) ಮಾ.17ರಂದು ಮನೆ ಮುಂದೆ ಆಟವಾಡುತ್ತಿದ್ದಾಗ ಕಾಣೆಯಾಗಿದ್ದನು. ಈ ಬಗ್ಗೆ ಬಾಲಕನ ಪೋಷಕರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ದೂರನ್ನು ಆದರಿಸಿ ತನಿಖೆ ನಡೆಸಿದ ಪೊಲೀಸರಿಗೆ ಮಗುವಿನ ಸುಳಿವು ಸಿಕ್ಕಿರಲಿಲ್ಲ.

ಈ ನಡುವೆ ನಿನ್ನೆ ಬೆಳಿಗ್ಗೆ ತಾಲೂಕಿನ ಸಾದಾರ್ಲಹಳ್ಳಿಯ ಹೊರವಲಯದಲ್ಲಿ ಮಗುವಿನ ತಲೆ ಬುರುಡೆ, ಅಂಗಾಂಗಗಳು ಬಿದ್ದಿರುವುದು ಕಂಡು ದಾರಿ ಹೋಕರು ಪೊಲೀಸರಿಗೆ ತಿಳಿಸಿದ್ದಾರೆ. ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಟ್ಟೆಯ ಗುರುತಿನ ಆಧಾರದ ಮೇಲೆ ಮಗುವಿನ ಪೋಷಕರು ಗುರುತು ಹಿಡಿದಿದ್ದು, ಮಗುವಿನ ಅಂಗಾಂಗಗಳನ್ನು ಶೇಖರಿಸಿಕೊಂಡು ಎಫ್.ಎಸ್.ಐ.ಎಲ್ ವಿಜ್ಞಾನ ಕೇಂದ್ರಕ್ಕೆ ರವಾನಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಸಂಬಂಧ: ಅದೇ ಗ್ರಾಮದ ರಾಮಾಂಜಿ ಎಂಬುವವನೊಂದಿಗೆ ಪ್ರಭಾವತಿ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯವಾಗಿ ಸಂಬಂಧ ಅಳಸಿತ್ತು. ರಾಮಾಂಜಿ ದ್ವೇಶದಲ್ಲಿ ಮಗುವನು ಅಪಹರಿಸಿ ವೈರಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಗೋಣಿ ಚೀಲದಲ್ಲಿ ಸಾದಾರಹಳ್ಳಿಯ ಹೊರವಲಯದಲ್ಲಿ ಬಿಸಾಡಿದ್ದ. ಕಾಡು ಪ್ರಾಣಿಗಳು ಮಗುವನ್ನು ತಿದ್ದಿರುವ ಶಂಕೆಯಿದ್ದು, ಕೇವಲ ಮಗುವಿನ ಮೂಳೆಗಳು ಮತ್ತು ಬಟ್ಟೆ ಪತ್ತೆಯಾಗಿದೆ ಎಂದು ಸಿಪಿಐ ಶಶಿಧರ್ ಪತ್ರಿಕೆಗೆ ತಿಳಿಸಿದ್ದಾರೆ.

ಆರೋಪಿ ಬಂಧನ: ಮಗುವಿನ ಮೂಳೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಿಪಿಐ ಶಶಿಧರ್ ಕಾರ್ಯ ಪ್ರವೃತ್ತರಾಗಿ ಪ್ರಭಾವತಿಯ ಮಾಜಿ ಪ್ರಿಯಕರನನ್ನು ಕರೆತಂದು ತೀವ್ರವಾಗಿ ವಿಚಾರಣೆ ಮಾಡಿದಾಗ ತಾನೇ ಕೊಲೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿದ್ದಾನೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಅರೋಪಿ ರಾಮಾಂಜಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

Facebook Comments