ಉಸಿರುಗಟ್ಟಿಸಿ ಪತ್ನಿ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ,ಮೇ 16- ಮನೆಯ ಹೊರಗೆ ಮಲಗಿದ್ದ ಪತ್ನಿಯನ್ನು ಉಸಿರುಗಟ್ಟಿಸಿ ನಂತರ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪತಿ ಪರಾರಿಯಾಗಿರುವ ಘಟನೆ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊಸದುರ್ಗ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಶುಭಾ(27) ಕೊಲೆಯಾದ ದುರ್ದೈವಿ.

ಬೇವಿನಹಳ್ಳಿಯ ಕರಿಯಪ್ಪ ಎಂಬಾತನನ್ನು ವಿವಾಹವಾಗಿದ್ದ ಶುಭಾ ನಡುವೆ ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ಜಗಳ ನಡೆದಿತ್ತು ಎನ್ನಲಾಗಿದೆ. ರಾತ್ರಿಯೂ ಸಹ ದಂಪತಿ ನಡುವೆ ಜಗಳ ನಡೆದಿದ್ದು , ನಂತರ ಶುಭಾ ಮನೆಯ ಹೊರಗೆ ಮಲಗಿದ್ದರು.

ಇದೇ ಸಮಯವನ್ನು ಕಾಯುತ್ತಿದ್ದ ಪತಿ ಕರಿಯಪ್ಪ ತಡರಾತ್ರಿ ಗಾಢನಿದ್ರೆಯಲ್ಲಿದ್ದ ಶುಭಾರನ್ನು ಉಸಿರುಗಟ್ಟಿಸಿ ನಂತರ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬೆಳಗಿನ ಜಾವ ವಿಷಯ ಬೆಳಕಿಗೆ ಬಂದಿದ್ದು,ಸುದ್ದಿ ತಿಳಿದ ಹೊಸದುರ್ಗ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Facebook Comments