ಮಗಳು ಬಾಯ್ ಫ್ರೆಂಡ್ ಜೊತೆ ಮಲಗಿದ್ದಾಗಲೇ ಬಂದ ತಂದೆ, ಮುಂದೆ ನಡೆದದ್ದು ಘನಘೋರ ಘಟನೆ..!
ಕಲಬುರಗಿ,ಜೂ 5-ಮಗಳು ತನ್ನ ಪ್ರಿಯಕರನೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದನ್ನು ಕಣ್ಣಾರೆ ಕಂಡ ಚಿಕ್ಕಪ್ಪನೊಬ್ಬ ಇಬ್ಬರನ್ನೂ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬೆಳಗುಂಪಾ ಗ್ರಾಮದಲ್ಲಿ ನಡೆದಿದೆ. ಶಂಕರ್ ಮ್ಯಾಕೇರಿ(40) ಹಾಗೂ ಅಡೆಮ್ಮ(30) ಕೊಲೆಯಾದವರು.
ಈ ಇಬ್ಬರೂ ವಿವಾಹಿತರಾಗಿದ್ದು ಇಬ್ಬರಿಗೂ ಮಕ್ಕಳಿದ್ದಾರೆ. ಅಡೆಮ್ಮಳನ್ನು ಪತಿ ಬಿಟ್ಟು ಹೋಗಿದ್ದರಿಂದ ಆಕೆ ಸಹೋದರ ಸಂಬಂಧಿಕರ ಜೊತೆ ವಾಸವಾಗಿದ್ದಳು. ಇದೇ ಗ್ರಾಮದ ನಿವಾಸಿ ಶಂಕರ್ ಮ್ಯಾಕೇರಿ ಪರಿಚಯವಾಗಿ ಇಬ್ಬರೂ ಪ್ರೀತಿಸುತ್ತಿದ್ದರು.
ಅಷ್ಟೇ ಅಲ್ಲದೇ ಇಬ್ಬರ ನಡುವೆಯೂ ಅನೈತಿಕ ಸಂಬಂಧವೂ ಇತ್ತು. ಆಗಾಗ್ಗೆ ಇಬ್ಬರು ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು ಎನ್ನಲಾಗಿದೆ. ನಿನ್ನೆ ಇವರಿಬ್ಬರು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಗಲೇ ಚಿಕ್ಕಪ್ಪನ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡು ಇಬ್ಬರನ್ನು ಸ್ಥಳದಲ್ಲಿಯೇ ಕೊಚ್ಚಿ ಕೊಲೆ ಮಾಡಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಫರಹತ್ತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.