ಸುಪಾರಿ ನೀಡಿ ಪತಿಯನ್ನು ಮುಗಿಸಿದ್ದ ಪತ್ನಿ ಸೇರಿ 7 ಆರೋಪಿಗಳು ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಹೊಸಕೋಟೆ, ಸೆ.27- ತಾಲ್ಲೂಕಿನಲ್ಲಿ ನಡೆದಿದ್ದ ಲಕ್ಕೊಂಡಹಳ್ಳಿ ನಾರಾಯಣಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಹೊಸಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ನಾರಾಯಣಸ್ವಾಮಿ ಪತ್ನಿ ಶಾಂತವ್ಮ್ಮ, ಅಕ್ಷಯ್, ಲೋಕೇಶ್, ಶಕ್ತಿಪ್ರಸಾದ್, ಶ್ರಮಂತ್, ಮಂಜುನಾಥ್, ಶ್ರೀನಿವಾಸ್ ಬಂಧಿತ ಆರೋಪಿಗಳು.

2018ರ ಜೂನ್ 13ರಂದು ಕೊಲೆಯಾಗಿದ್ದು, ತನಿಖೆಯನ್ನು ಹೊಸಕೋಟೆ ಪೊಲೀಸರು ಕೈಗೊಂಡಿದ್ದರು. ಮೊನ್ನೆ ನಂದಗುಡಿ ಉಪನಿರೀಕ್ಷಕ ಲಕ್ಷ್ಮೀನಾರಾಯಣ, ಪಿಎಸೈ ಮಂಜುನಾಥ್ ಸರಗಳ್ಳರನ್ನು ಬಂಧಿಸಿದಾಗ ಅದರಲ್ಲಿ ಒಬ್ಬ ಲೋಕೇಶ್ ಎಂಬಾತ ಈ ಕೊಲೆಯನ್ನು ಮಾಡಿರುವುದಾಗಿ ತಿಳಿಸಿದ್ದ.

ಅಲ್ಲದೆ ನಾರಾಯಣಸ್ವಾಮಿಯ ಪತ್ನಿ ಶಾಂತಮ್ಮನೇ ಕೊಲೆಗೆ ಒಂದು ಲಕ್ಷ ಸುಫಾರಿ ನೀಡಿದ್ದಳು ಎಂದು ಬಾಯಿ ಬಿಟ್ಟಿದ್ದ. ಸಂಪೂರ್ಣ ತನಿಖೆ ನಡೆಸಿದಾಗ ಹೆಂಡತಿ ಶಾಂತಮ್ಮ, ಮಗಳು ಕಾವ್ಯಳಿಗೆ ನಾರಾಯಣಸ್ವಾಮಿ ಸದಾ ಕಿರುಕುಳ ನೀಡುತ್ತಿದ್ದ, ಆ ಕಿರುಕುಳದಿಂದ ಮುಕ್ತಿ ಹೊಂದಲು ರಾತ್ರಿ ಊಟದಲ್ಲಿ ವಿಷದ ಮಾತ್ರೆಗಳನ್ನು ಹಾಕಿದ್ದರು ಊಟದ ನಂತರ ನಾರಾಯಣಸ್ವಾಮಿಯನ್ನು ಹೊತ್ತೊಯ್ದು ಹೊಸಕೋಟೆ ಮತ್ತು ಸೂಲಿಬೆಲೆ ರಸ್ತೆಯ ಆಲಪನಹಳ್ಳಿ ಸ್ಮಶಾನದ ಹತ್ತಿರ ನಾವುಗಳು ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮವಹಿಸಿದ ಡಿವೈಎಸ್ಪಿ ಸಖ್ರಿ, ಸಿಪಿಐ ಮಂಜುನಾಥ್, ಸಿಪಿಐ ಶಿವರಾಜು ಮತ್ತು ಎಸ್‍ಐ ಲಕ್ಷ್ಮೀನಾರಾಯಣ ಅವರ ತಂಡಕ್ಕೆ ನಗದು 25 ಸಾವಿರ ಬಹುಮಾನ ಘೋಷಿಸಲಾಗಿದೆ. ಎಂದು ಜಿಲ್ಲಾ ಎಸ್‍ಪಿ ರವಿಚನ್ನಣ್ಣನವರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Facebook Comments