ತುಮಕೂರಲ್ಲಿ ಮೊಬೈಲ್ ವಿಚಾರಕ್ಕೆ ಹರಿಯಿತು ನೆತ್ತರು..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಫೆ.22- ನಗರದಲ್ಲಿ ಮೊಬೈಲ್ ವಿಚಾರಕ್ಕೆ ಎರಡು ರೌಡಿ ಗುಂಪುಗಳ ನಡುವೆ ಮಾರಾಮಾರಿ ನಡೆದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ನಿಖಿಲ್‍ಗೌಡ(22) ಕೊಲೆಯಾದ ಯುವಕ. ಘಟನೆ ಸಂಬಂಧ ಎರಡೂ ಗುಂಪಿನ ಕೆಲವರನ್ನು ರಾತ್ರಿಯೇ ವಶಕ್ಕೆ ಪಡೆದು ನಗರ ಠಾಣೆ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ನಗರದ ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನೇ ದಿನೇ ಪುಡಿ ರೌಡಿಗಳ ಅಟ್ಟಹಾಸ ಮುಂದುವರಿಯುತ್ತಿದೆ. ನಗರದಲ್ಲಿ ಬಾಲಾಜಿ ಹಾಗೂ ಆದಿ ಎಂಬುವರು 18 ರಿಂದ 21 ವರ್ಷದ ವಯಸ್ಸಿನ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ಎಸ್ ಎಸ್ ಪುರ, ಕುವೆಂಪು ನಗರ,ಬಟವಾಡಿ ಸೇರಿದಂತೆ ಹಲವಾರು ಕಡೆ ತಮ್ಮ ಹವಾ ಕ್ರೀಯೇಟ್ ಮಾಡಿ ಕೊಂಡು ಓಡಾಡುತ್ತಿದ್ದರು.

ಬಾಲಾಜಿ ತಂಡದ ರೋಹಿತ್ ಪ್ರಥಮ ಪಿಯುಸಿ ಓದುತ್ತಿದ್ದು ಕಳೆದ 15 ದಿನಗಳ ಹಿಂದೆ ಕಾಲೇಜು ಸಮೀಪ ಇರುವ ಅಂಗಡಿ ಮುಂದೆ ಸಿಗರೇಟು ಸೇದಿ ಎಸೆದಿದ್ದಾನೆ.ಆಗ ಅಲ್ಲಿಯೇ ಇಧ್ದ ಆದಿ ಎಂಬುವನ ಕಾಲು ಹತ್ತಿರ ಸಿಗರೇಟು ತುಂಡು ಬಿದ್ದಿದೆ ಇದರಿಂದ ಕೆರಳಿದ ಈ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಅದು ವಿಕೋಪಕ್ಕೆ ಹೋಗಿ ಇಬ್ಬರೂ ಬಡಿದಾಡಿ ಕೊಂಡಿದ್ದಾರೆ.

ಆದಿಯ ಬಳಿ ಇದ್ದ 80 ಸಾವಿರ ಬೆಲೆಬಾಳುವ ಜಿ ಫೋನ್ ಕೆಳಗೆ ಬಿದ್ದು ಒಡೆದು ಹೋಗಿದೆ ಅಂದಿನಿಂದ ಆದಿ ನನಗೆ ಮೊಬೈಲ್ ಕೊಡಿಸು ಎಂದು ಹಿಂದೆ ಬಿದ್ದಿದ್ದಾನೆ . ಆಗ ಈ ವಿಷಯ ಬಾಲಾಜಿಗೆ ತಿಳಿದು ಮೊಬೈಲ್ ಕೊಡಿಸಲ್ಲ ಎಂದು ಧಮ್ಕಿ ಹಾಕಿದ್ದಾನೆ.

ಆದಿ ನಮಗೆ ಮೊಬೈಲ್ ಕೊಡಿಸುವಂತೆ ಬಾಲಾಜಿಯ ತಂಡದ ರೋಹಿತ್ ನನ್ನು ಪೀಡಿಸುತ್ತಿದ್ದ ಮೊಬೈಲ್ ಕೊಡಿಸಿದ ಇರುವ ಹಿನ್ನೆಲೆಯಲ್ಲಿ ಆದಿ ತನ್ನ ಕಡೆಯ ಬೀರೇಶ್ ಎಂಬುವನ ಕಡೆಯಿಂದ ಬಾಲಾಜಿಗೆ ಫೋನ್ ಕೊಡಿಸುವಂತೆ ಧಮ್ಕಿ ಹಾಕಿರುತ್ತಾನೆ.

ಕಳೆದ ಮೂರು ದಿನಗಳ ಹಿಂದೆ ತುಮಕೂರಿನ ಹೊರಭಾಗದಲ್ಲಿರುವ ಉಪ್ಪಾರ ಹಳ್ಳಿ 80 ಅಡಿ ರಸ್ತೆಯಾದ ಗೆದ್ದಲು ಹಳ್ಳಿಯ ಸಮೀಪವಿರುವ ಟಿ ಅಂಗಡಿ ಮುಂದೆ ಆದಿ ಟೀಂ ಇದ್ದು ಅಲ್ಲಿಗೆ ಬಾಲಾಜಿ ಟೀಂ ಮಾರಕಾಸ್ತ್ರಗಳೊಂದಿಗೆ ಆದಿಯನ್ನು ಹತ್ಯೆ ಮಾಡಲು ಹೋಗಿದ್ದು ಈ ಸಂದರ್ಭದಲ್ಲಿ ಅಲ್ಲಿನೆಡೆದ ಗಲಾಟೆಯಲ್ಲಿ ನಿಖಿಲ್ ಗೌಡ ಏರು ದನಿಯಲ್ಲಿ ಮತನಾಡಿದ್ದನ್ನು ಶೊಯೋಬ್ ಎಂಬುವನು ನೋಡಿರುತ್ತಾನೆ.

ಹೊಡೆದಾಡಬೇಡಿ ಇದು ಮೂರನೆಯವರಿಗೆ ಲಾಭವಾಗುತ್ತದೆ ಎಂದು ರಾಜಿ ಸಂಧಾನ ಮಾಡಲು ಕೆಲವರು ನೀಡಿದ ಸೂಚನೆ ಮೇರೆಗೆ ತುಮಕೂರು ನಗರದ ಆದರ್ಶ ನಗರದಲ್ಲಿರುವ ಲೇಔಟ್ ಒಂದರಲ್ಲಿ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸೋಣವೆಂದು ನಿನ್ನೆ ಸಂಜೆ ನಾಲ್ಕು ಗಂಟೆಗೆ ಸಮಯ ನಿಗದಿ ಮಾಡಲಾಗಿತ್ತು. ಅಂಗಡಿಗೆ ಆದಿ ತಂಡದ ಯುವಕರು ಮಾರಕಾಸ್ತ್ರಗಳೊಂದಿಗೆ ಆಗಮಿಸಿದ್ದಾರೆ.

ಬಾಲಾಜಿ ತಂಡದವರು ಕೇವಲ ಮಾತುಕತೆ ಯಲ್ಲವ ಎಂದು ಯಾವುದೇ ಅಸ್ತ್ರ ಗಳಿಲ್ಲದೆ ಬಂದಿದ್ದರು ಎಂದು ಈ ಸಂದರ್ಭದಲ್ಲಿ ತಿಳಿದುಬಂದಿದೆ.ಆಗ ಮಾತುಕತೆ ನಡೆಯುವ ಸಂದರ್ಭದಲ್ಲಿ ಬಾಲಾಜಿ ತಂಡದಲ್ಲಿದ್ದ ನಿಖಿಲ್ ಗೌಡ ಜಾಸ್ತಿ ಮಾತನಾಡುತ್ತಾನೆ ಎಂದು ಆತನ ಮೇಲೆ ದಾಳಿ ನಡೆಸಿ ಮನಸೋಇಚ್ಛೆ ಕಾಲಿನಲ್ಲಿ ಒದ್ದಿದ್ದಾರೆ.

ಇದೇ ಸಂದರ್ಭದಲ್ಲಿ ತುಮಕೂರು ನಗರದ ಶೊಯೋಬï ಎಂಬವನು ಏಕಾಏಕಿ ಡ್ರಾಗನ್ ನಿಂದ ನಿಖಿಲ್‍ಗೌಡಗೆ ಚುಚ್ಚಿದ್ದಾನೆ. ತಕ್ಷಣ ಬಾಲಾಜಿ ತಂಡದ ಯುವಕರು ನಿಖಿಲ್ ಗೌಡ ನನ್ನ ಹತ್ತಿರವಿದ್ದ ತಮ್ಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ನಿಖಿಲ್ ಗೌಡ ಮೃತಪಟ್ಟಿದ್ದಾನೆ.

ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ ಎಂಬ ಸುದ್ದಿ ತಿಳಿದ ಕೂಡಲೇ ನಗರ ಠಾಣೆ ಇನ್ಸ್‍ಪೆಕ್ಟರ್ ನವೀನ್, ಸಬ್‍ಇನ್ಸ್‍ಪೆಕ್ಟರ್ ಮಂಜುನಾಥ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ ಸ್ಥಳೀಯರ ಮಾಹಿತಿ ಅನ್ವಯ ತನಿಖೆ ಕೈಗೊಂಡಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಶ್ರೀನಿವಾಸ್ , ಡಿವೈಎಸ್ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕೋನ ವಂಶಿ ಕೃಷ್ಣ ಅವರ ಆದೇಶದ ಅನ್ವಯ ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿಗಳಾದ ಉದ್ದೇಶ ಅವರ ಮಾರ್ಗದರ್ಶನದಲ್ಲಿ ಕೊಲೆ ಮಾಡಿದ ಆರೋಪಿಗಳು ಸೇರಿದಂತೆ ಎರಡು ಗುಂಪುಗಳನ್ನು ಕಟ್ಟಿಕೊಂಡು ನಗರದಲ್ಲಿ ಸಾರ್ವಜನಿಕರನ್ನು ಹೆದರಿಸುವುದು, ರಾಬರಿಯಲ್ಲಿ ತೊಡಗಿಕೊಂಡಿರುವ ವರನ್ನು ವಶಕ್ಕೆ ತೆಗೆದುಕೊಳ್ಳಲು ನಗರ ಠಾಣೆಯ ಪೊಲೀಸರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಎರಡು ಕಡೆಯ ಗುಂಪಿನ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಯನ್ನು ತಿವ್ರಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

Facebook Comments

Sri Raghav

Admin