ಭೀಕರ ಕೊಲೆ ರಹಸ್ಯ ಭೇದಿಸಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಸೆ.27- ಕೆಲ ದಿನಗಳ ಹಿಂದೆ, ನಗರದ ಕಣ್ವಾ ಬಡಾವಣೆಯಲ್ಲಿ ನಡೆದ ಭೀಕರ ಕೊಲೆ ರಹಸ್ಯ ಭೇದಿಸಿದ ಗ್ರಾಮಾಂತರ ವೃತ್ತ ನಿರೀಕ್ಷಕರ ತಂಡ ಕೆಲ ಆರೋಪಿಗಳನ್ನು ಬಂಸಿ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.

ಬಂತ ಆರೋಪಿಗಳು ನಗರದ ಸೈಯದ್‍ವಾಡಿಯ ಸೈಯದ್‍ಖಲಿಂ ಎಂಬುವರ ಮಗ ಸೈಯದ್‍ವಲಿ(23), ಲೇಟ್ ಅಮಿನ್‍ಖಾನ್ ಎಂಬುವರ ಮಗನಾದ ಸೈಯದ್ ಮುನಿರ್(24), ಹಾಗೂ ಮಸಾಜ್ ಎಂಬುವರ ಮಗ ರುಜೀರ್(23) ಎಂದು ಹೇಳಲಾಗಿದೆ.

ಕೆಲ ದಿನಗಳ ಹಿಂದೆ ಸೈಯದ್‍ವಾಡಿಯ ಲೇಟ್ ಆಯೂಬ್‍ಪಾಷ ಎಂಬುವರ ಮಗನಾದ ರಾಯಿದ್‍ಪಾಷ (25) ಎಂಬಾತನನ್ನು ಈ ಮೂರು ಮಂದಿ ಆರೋಪಿಗಳು ಮೃತ ರಾಯಿದ್‍ಪಾಷನನ್ನು ಬೈಕ್‍ನಲ್ಲಿ ಕರೆದುಕೊಂಡು ಕಣ್ವಾ ಬಡಾವಣೆಯ ಬೆಸ್ಕಾಂ ಕಚೇರಿಯ ಬಳಿ, ಆತನ ಜೊತೆ ವಾಗ್ವಾದ ನಡೆಸಿ ಮೊದಲೇ ಸಿದ್ದಪಡಿಸಿದ ಡ್ರ್ಯಾಗನ್‍ನಿಂದ ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು,

ಈ ಪ್ರಕರಣದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಎಸ್.ಗಿರೀಶ್, ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ರಾಮರಾಜನ್ ಹಾಗೂ ಗ್ರಾಮಾಂತರ ವೃತ್ತ ನಿರೀಕ್ಷಕ ವಸಂತ್ ಸ್ಥಳ ಪರಿಶೀಲನೆ ನಡೆಸಿದ್ದರು.

ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ, ಕೊಲೆಯಾದ ಸ್ಥಳ ಹಾಗೂ ಸುತ್ತಮುತ್ತಲಿನ ಕೆಲ ಮೀಟರ್‍ವರೆಗೆ ಕೊಲೆಗಾರರ ಸುಳಿವಿನ ಬಗ್ಗೆ ಪರೀಕ್ಷೆ ನಡೆಸಿದ್ದರು.

ಕೊಲೆಯ ರಹಸ್ಯದ ಬಗ್ಗೆ ಮಾಹಿತಿ ಪಡೆದ ಸಿಪಿಐ ವಸಂತ್ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳ ಜಾಡು ಹಿಡಿದು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ,.

ಆರೋಪಿಗಳ ವಿಚಾರಣೆಯ ಸಂದರ್ಭದಲ್ಲಿ ತಮ್ಮ ಹುಡುಗನಿಗೆ ಕೆಟ್ಟ ಅಭ್ಯಾಸಗಳನ್ನು ಕಲಿಸುತ್ತಿದ್ದರಿಂದ, ಹಲವಾರು ಭಾರಿ ತಿಳಿಹೇಳಿದರೂ ಕೇಳದೆ ಇದ್ದುದ್ದರಿಂದ ಆತನನ್ನು ಕೊಲೆ ಮಾಡಬೇಕಾಯಿತು ಎಂದು ಹೇಳಿಕೆ ನೀಡಿದ್ದಾರೆನ್ನಲಾಗಿದೆ.

ಕೊಲೆ ನಡೆದ ಸಂದರ್ಭದಲ್ಲಿ ಇನ್ನು ಕೆಲವರು ಸ್ಥಳದಲ್ಲಿದ್ದರೆಂದು ಮಾಹಿತಿ ಲಭ್ಯವಾಗಿದ್ದು, ಉಳಿದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಕಾರ್ಯೋನ್ಮುರಾಗಿದ್ದಾರೆ.

ಆರೋಪಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ, ಈ ಪ್ರಕರಣದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Facebook Comments

Sri Raghav

Admin