ತಂದೆಯನ್ನೇ ಕೊಂದಿದ್ದ ಮಗ : ರಹಸ್ಯ ಬಯಲಿಗೆಳೆದ ಗುಬ್ಬಿ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು / ಗುಬ್ಬಿ , ಮಾ.27- ಕಳೆದ ಕೆಲವು ವರ್ಷಗಳಿಂದ ನೆಡೆಯುತ್ತಿದ್ದ ಅಪ್ಪ -ಮಕ್ಕಳ ಆಸ್ತಿ ವಿವಾದದ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗುಬ್ಬಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಸವೇಶ್ವರ ಬಡಾವಣೆ ನಿವಾಸಿ ವೆಂಕಟರಾಮಯ್ಯ (50) ಕೊಲೆಯಾದ ದುರ್ದೈವಿಯಾಗಿದ್ದು, ಈ ಸಂಬಂಧ ಈತನ ಪುತ್ರ ಸೂರ್ಯಪ್ರಕಾಶ್‍ನನ್ನು ಪೋಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ:ಪತ್ನಿ, ಮಗ-ಮಗಳಿಂದ ದೂರವಿದ್ದ ವೆಂಕಟರಾಮಯ್ಯ ಗುಬ್ಬಿಯ ಸಿಡಿಲು ಬಸವೇಶ್ವರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆಸ್ತಿ ವಿಚಾರಕ್ಕೆ ಕಳೆದ ಕೆಲವು ವರ್ಷಗಳಿಂದ ಅಪ್ಪ-ಮಕ್ಕಳ ನಡುವೆ ಜಗಳ ನಡೆಯುತ್ತಿತ್ತು. ವೆಂಕಟರಾಮಯ್ಯನ ಹೆಂಡತಿ ಇಬ್ಬರು ಮಕ್ಕಳು ತುಮಕೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು.
ಈ ನಡುವೆ ಹಣಕಾಸಿನ ತೊಂದರೆ ಇದೆ ನಮಗೆ ಬರ ಬೇಕಾದ ಆಸ್ತಿಯನ್ನು ಭಾಗ ಮಾಡುವಂತೆ ಪದೇ ಪದೇ ಜಗಳ ನಡೆಯುತ್ತಿತ್ತು.

ರಾತ್ರಿ ಅಪ್ಪನನ್ನು ಹುಡುಕಿ ಕೊಂಡು ಬಂದ ಮಗ ಆಸ್ತಿ ವಿಚಾರವಾಗಿ ಜಗಳ ತೆಗೆದು ಅಪ್ಪನನ್ನು ಕೊಲೆ ಮಾಡಲೇ ಬೇಕು ಎಂದು ಇಡಿ ದಿನ ಗುಬ್ಬಿಯಲ್ಲಿ ತನ್ನ ತಂದೆಯ ಚಲನವಲನ
ಗಳನ್ನು ಗಮನಿಸುತ್ತಿದ್ದ ಮಗ ಸೂರ್ಯ ಪ್ರಕಾಶ್ ರಾತ್ರಿ 7.30ಕ್ಕೆ ಮನೆಯ ಹತ್ತಿರ ಹೋಗಿ ಜಗಳ ತೆಗೆದು ಮಚ್ಚಿನಿಂದ ಮನ ಬಂದಂತೆ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಅಪ್ಪನನ್ನು ಕೊಲೆ ಮಾಡಿ ಪರಾರಿಯಾದ ವಿಷಯ ಗುಬ್ಬಿ ಪೋಲಿಸರಿಗೆ ತಿಳಿದು ತಕ್ಷಣ ಸ್ಥಳಕ್ಕೆ ಗುಬ್ಬಿ ಪೋಲಿಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಜ್ಞಾನಮೂರ್ತಿ, ವೃತ್ತ ನಿರೀಕ್ಷಕರಾದ ರಾಮಕೃಷ್ಣ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿರಾ ಗ್ರಾಮಾಂತರ ಡಿವೈಎಸ್ಪಿ ಕುಮಾರಪ್ಪ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಕ್ಷಣವೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿ ಕೋನ ವಂಶಿ ಕೃಷ್ಣ ಹಾಗೂ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಉದೇಶ್ ಇವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರಾದ ರಾಮಕೃಷ್ಣ ಹಾಗೂ ಜ್ಞಾನ ಮೂರ್ತಿ ಇವರ ವಿಶೇಷ ತಂಡವನ್ನು ರಚಿಸಿದ್ದರು.

ವಿಶೇಷ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆರೋಪಿಯ ಮೋಬೈಲ್ ಲೊಕೇಷನ್ ಪತ್ತೆ ಹಚ್ಚಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಇದೆ ವೇಳೆ ಕೊಲೆಯನ್ನು ತಡೆಯಲು ಹೋಗಿದ್ದ ಇಬ್ಬರ ಮೇಲೆ ಹಲ್ಲೇಮಾಡಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Facebook Comments