ಸಹೋದರಿ ಜೊತೆ ಮಾತನಾಡಿದ್ದಕ್ಕೆ ಯುವಕನ ಹತ್ಯೆ
ಈ ಸುದ್ದಿಯನ್ನು ಶೇರ್ ಮಾಡಿ
ಬಾಗಲಕೋಟೆ,ಅ.11-ಸಹೋದರಿ ಜೊತೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಯುವಕನನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಳಗ್ಗೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ನಿವಾಸಿ ನಬಿಸಾಬ್(22) ಕೊಲೆಯಾದ ಯುವಕ.
ವಿಠಲ ವಡವಣಿ ಸಹೋದರಿ ಜೊತೆ ನಬಿಸಾಬ್ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದ್ದು, ಸಹೋದರಿಗೆ ಫೋನ್ ಮಾಡಬೇಡ ಎಂದು ನಬಿಸಾಬ್ಗೆ ಎಚ್ಚರಿಕೆ ನೀಡಿದ್ದನು.
ಆದಾಗ್ಯೂ ದೂರವಾಣಿ ಕರೆ ಮಾಡಿದ್ದರಿಂದ ಕೋಪಗೊಂಡ ವಿಠಲ ವಡವಣಿ ತನ್ನ ಸಹಚರ ಮಂಜುನಾಥ ನರಿಯೊಂದಿಗೆ ಬಂದು ನಿನ್ನ ಜೊತೆ ಮಾತನಾಡಬೇಕೆಂದು ನಬಿಸಾಬ್ನನ್ನು ಕರೆದೊಯ್ದಿದ್ದಾರೆ.
ಸುನಗಾ ಕ್ರಾಸ್ ಬಳಿ ನಬಿಸಾಬ್ಗೆ ದೊಣ್ಣೆಯಿಂದ ಮನಬಂದಂತೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ವಿಷಯ ತಿಳಿದಿ ಬೀಳಗಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಈ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
Facebook Comments