ಕೌಟುಂಬಿಕ ಕಲಹದಲ್ಲಿ ಭಾವನ ರುಂಡ ಚೆಂಡಾಡಿದ ಭಾಮೈದುನರು..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಜು.22- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭಾವನ ರುಂಡವನ್ನು ಕತ್ತರಿಸಿದ ಭಾಮೈದುನರು ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಾಂಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿಗಳಾದ ಇರ್ಪಾನ್ ಮತ್ತು ಗೌಸ್ ಹಾಗು ಮೃತ ಸದ್ದಾಂ (26) ನಡುವೆ ಕಳೆದ ಎರಡು ವರ್ಷಗಳಿಂದ ಆಗಾಗ್ಗೆ ಜಗಳವಾಗುತ್ತಿದ್ದು , ನಿನ್ನೆ ಕೂಡ ಕೌಟುಂಬಿಕ ವಿಷಯವಾಗಿ ಇವರ ನಡುವೆ ಜಗಳವಾಗಿದ್ದು ಒಂದು ಹಂತದಲ್ಲಿ ಭಾಮೈದುನರು ತಮ್ಮ ಭಾವನ ರುಂಡವನ್ನು ಕುಡುಗೋಲಿನಿಂದ ಕತ್ತರಿಸಿ ಕೊಲೆ ಮಾಡಿದ್ದಾರೆ.

ಕೊಲೆ ಮಾಡಿದ ನಂತರ ಸದ್ದಾಂ ರುಂಡನೊಂದಿಗೆ ಇರ್ಪಾನ್ ಹಾಗೂ ಗೌಸ್ ಜಿಲ್ಲೆಯ ನಾಂಪಲ್ಲಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.

ಮೃತ ಸದ್ದಾಂ ಮೃತದೇಹವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ನಾಂಪಲ್ಲಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments