ಪತ್ನಿಯನ್ನು ಕೊಂದು 3 ದಿನ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಪಾಪಿ ಪತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ,ನ.5- ಹೆಂಡತಿಯನ್ನು ಕೊಂದ ಪಾಪಿ ಪತಿ ಯಾರಿಗೂ ತಿಳಿಯ ಬಾರದೆಂದು ಮೂರು ದಿನ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಘಟನೆ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸಂಗೀತಾ ಸಕ್ಕರಗಿ (35) ಕೊಲೆಯಾದ ಮಹಿಳೆ. ಈಕೆಯ ಪತಿ ಶ್ರೀಶೈಲ ಸಕ್ಕರಗಿ (45) ಕೊಲೆ ಮಾಡಿರುವ ಆರೋಪಿ.

ವಾಹನ ಚಾಲಕನಾಗಿರುವ ಶ್ರೀಶೈಲ್, ಸುಮಾರು ವರ್ಷಗಳ ಹಿಂದೆ ಸಂಗೀತಾಳನ್ನು ಮದುವೆಯಾಗಿದ್ದನು. ನಂತರದ ಒಂದು ವರ್ಷದಲ್ಲಿ ಮಗು ಜನಿಸಿ ಸಾವನ್ನಪ್ಪಿತ್ತು. ಆ ಬಳಿಕ ಮತ್ತೆ ಮಕ್ಕಳು ಜನಿಸಿರಲಿಲ್ಲ. ಈ ಕಾರಣಕ್ಕೆ ಗಂಡ ಹಾಗೂ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರಂತೆ.

ಮತ್ತೊಂದು ಮದುವೆಯಾಗಲು ಡಿವೋರ್ಸ್ ಕೊಡು ಎಂದು ಸಂಗೀತಾಳನ್ನು ಶ್ರೀಶೈಲ್ ಪೀಡಿಸುತ್ತಿದ್ದನೆಂದು ತಿಳಿದುಬಂದಿದೆ. ಇದೆ ವಿಷಯವಾಗಿ ಮೂರು ದಿನಗಳ ಹಿಂದೆ ಗಂಡ ಹೆಂಡತಿ ನಡುವೆ ಜಗಳವಾಗಿದ್ದು, ಆಕೆ ಕುತ್ತಿಗೆಗೆ ನೇಣು ಬಿಗಿದ ಭೂಪ ಆಕೆಯನ್ನು ಕೊಂದು ಶವವನ್ನು ಮಂಚದ ಕೇಳಗೆ ಬಚ್ಚಿಚ್ಚು ಸುಮ್ಮನಾಗಿದ್ದಾನೆ.

ಇಂದು ಮನೆಯಿಂದ ದುರ್ನಾಥ ವಾಸನೆ ಹೊರ ಬಂದ ಹಿನ್ನೆಲೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಮಾಡಿದ ಪೊಲೀಸರು, ಶ್ರೀಶೈಲ್ ಹಾಗೂ ಅತ್ತೆ ಪಾರ್ವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Facebook Comments