ಕೊಲೆ ಮಾಡಿ ಸಿನಿಮಾ ಸ್ಟೈಲಲ್ಲಿ ಅಪಘಾತವೆಂದು ಬಿಂಬಿಸಿ ಆರೋಪಿಗಳು ಎಸ್ಕೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಜ.30-ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ನಂತರ ಅಪಘಾತವೆಂದು ಬಿಂಬಿಸಲು ಆತನ ಕಾರನ್ನು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಸಿ ಆರೋಪಿಗಳು ಅಲ್ಲಿಂದ ಪರಾರಿಯಾಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಅಕ್ಮಲ್ ಅಹಮದ್ (35) ಕೊಲೆಯಾಗಿರುವ ವ್ಯಕ್ತಿ. ಕೊರಟಗೆರೆ-ಮಧುಗಿರಿ ಮಾರ್ಗದ ತುಂಬಾಡಿಯಲ್ಲಿ ಎಡಭಾಗದಲ್ಲಿ ಇರುವ ವಿದ್ಯುತ್ ಕಂಬಕ್ಕೆ ಗುದ್ದಿ ಅಪಘಾತದಲ್ಲಿ ಮೃತಪಟ್ಟಿದ್ದಾನೆಂದು ಸೀನಿಮಿಯ ರೀತಿ ಬಿಂಬಿಸಿದ್ದಾರೆ.

ಕೊಲೆ ಮಾಡಿದ ನಂತರ ಅಪಘಾತವೆಂದು ಬಿಂಬಿಸಲು ಆರೋಪಿಗಳು ಅಕ್ಮಲ್ ಅಹಮದ್ ಮೃತದೇಹವನ್ನು ಕಾರು ಚಲಾಯಿಸುತ್ತಿರುವಂತೆ ಚಾಲಕನ ಸೀಟಿನಲ್ಲಿ ಕೂರಿಸಿ, ವಿದ್ಯುತ್ ಕಂಬಕ್ಕೆ ಗುದ್ದಿಸಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಈ ಮಾರ್ಗದಲ್ಲಿ ಹೋಗುತ್ತಿದ್ದ ತುಂಬಾಡಿಯ ಗ್ರಾಮಸ್ಥರು ನೋಡಿಕೊರಟಗೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುತ್ತುರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಉದ್ದೇಶ್ ಅವರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿ ವೃತ್ತ ನಿರೀಕ್ಷಕರಾದ ನದಾಫ್ ಅವರು ಪರಿಶೀಲನೆ ನಡೆಸಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಕೋನವಂಶಿಕೃಷ್ಣ ಮತ್ತು ಡಿವೈಎಸ್ಪಿ ರಾಮಕೃಷ್ಣ ಅವರಿಗೆ ತಿಳಿಸಿದ್ದಾರೆ. ಬೆರಳಚ್ಚು ತಜ್ಞರಾದ ಸಬ್‍ಇನ್ಸ್ಪೆಕ್ಟರ್ ಜಗದೀಶ್, ಶ್ವಾನದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ನಂತರ ಈ ಸಂಜೆ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಉದ್ದೇಶ್, ಕೊಲೆಯಾಗಿರುವ ವ್ಯಕ್ತಿ ಬೆಂಗಳೂರಿನ ನಿವಾಸಿ ಅಕ್ಮಲ್ ಅಹಮದ್ ಎಂಬ ಮಾಹಿತಿ ಲಭ್ಯವಾಗಿದೆ . ಅಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ರಾತ್ರಿ 1.30 ರಿಂದ 2 ಗಂಟೆಯ ಸಮಯದಲ್ಲಿ ಬೇರೆ ಕಡೆ ಕೊಲೆ ಮಾಡಿ ಇಲ್ಲಿಗೆ ತಂದು ಅಪಘಾತದ ಸನ್ನಿವೇಶವನ್ನು ಸೃಷ್ಟಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಎದೆ, ಹೊಟ್ಟೆ, ಬೆನ್ನಿಗೆ ಮಾರಕಾಸ್ತ್ರಗಳಿಂದ ಕಾರಿನಲ್ಲಿಯೇ ಇರಿದು ಹತ್ಯೆ ಮಾಡಲಾಗಿದೆ. ಅನೈತಿಕ ಸಂಬಂಧ ಅಥವಾ ಹಣಕಾಸಿನ ವಿಚಾರದಲ್ಲಿ ಹತ್ಯೆ ಮಾಡಿರಬಹುದೆಂಬ ಅನುಮಾನವಿದೆ ಎಂದು ಹೇಳಿದ್ದಾರೆ. ಈ ಗಾಗಲೇ ಬೆರಳಚ್ಚು ತಜ್ಞರು ನೀಡುವ ಮಾಹಿತಿ, ಹಾಗೂ ವಾಹನದ ಬಗ್ಗೆ ಮಾಹಿತಿಯನ್ನು ಈಗಾಗಲೇ ನಮ್ಮ ಅಕಾರಿಗಳು ಸಂಗ್ರಹಿಸಿದ್ದಾರೆ.ಡಿವೈಸ್ಪಿ ರಾಮಕೃಷ್ಣ, ವೃತ್ತ ನಿರೀಕ್ಷಕರಾದ ನದಾಫ್ ಇವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಈ ಕೊಲೆಯ ರಹಸ್ಯವನ್ನು ಸದ್ಯದಲ್ಲೇ ಪತ್ತೆಹಚ್ಚಲಿದ್ದಾರೆ ಎಂದು ಅವರು ತಿಳಿಸಿದರು.

Facebook Comments

Sri Raghav

Admin