ಗಂಡ- ಹೆಂಡತಿ ಜಗಳ ಮಗಳ ಕೊಲೆಯಲ್ಲಿ ಅಂತ್ಯ…!

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಜು.10- ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದೆ, ಆದರೆ ಅಪ್ಪ ಅಮ್ಮನ ಜಗಳದಲ್ಲಿ ಮಗು ಕೊಲೆಯಾಗಿರುವ ಹೃದಯ ವಿದ್ರಾವಕ ಘಟನೆ ಚೆನ್ನೈನ ತಿರುವನೆಲ್ಲಿಯಲ್ಲಿ ನಡೆದಿದೆ.  ಸುಗ್ರೀತಾ ತನ್ನ ಕುಡುಕ ತಂದೆಯ ಕ್ರೌರ್ಯಕ್ಕೆ ಬಲಿಯಾದ ನತದೃಷ್ಟೆ.

ಘಟನೆ ವಿವರ: ಚೆನ್ನೈನ ತಿರುವನೆಲ್ಲಿಯ ನಿವಾಸಿ ಎಸ್.ಕೈಲಾಸ್ ಅವರು ನೆರೆ ಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದ  ಮಗಳು ಸುಗ್ರೀತಾಳನ್ನು ಮನೆಗೆ ಹೋಗುವಂತೆ ಸೂಚಿಸಿದ್ದಾನೆ, ಆದರೆ ಆಕೆ ತಂದೆಯ ಮಾತನ್ನು ಲೆಕ್ಕಿಸದೆ ಆಟವಾಡುತ್ತಿದ್ದಳು ಇದರಿಂದ ತಂದೆ ಕುಪಿತಗೊಂಡಿದ್ದಾನೆ.

ಸಂಜೆ ಪಾನಮತ್ತನಾಗಿ ಬಂದ ಕೈಲಾಸ್, ತನ್ನ ಪತ್ನಿ ನೀಲಾವತಿಯೊಂದಿಗೆ ಮಗಳ ನಡವಳಿಕೆ ಕುರಿತು ಜಗಳವಾಡುತ್ತಿದ್ದಾಗ ಅಪ್ಪ- ಅಮ್ಮನ ಜಗಳವನ್ನು ಬಿಡಿಸಲು ಬಂದ ಸುಗ್ರೀತಾಳ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿ ಆಕೆಯನ್ನು ನೆಲಕ್ಕೆ ಅಪ್ಪಳಿಸಿ ಥಳಿಸಿದ್ದಾನೆ.

ಕೈಲಾಸ್ ಕೋಪ ಇಳಿದಾಗ ಗಾಯಗೊಂಡಿದ್ದ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸುಗ್ರೀತಾ ಸಾವನ್ನಪ್ಪಿರುವುದು ಗೊತ್ತಾಗಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವುದಕ್ಕಾಗಿ ಫೋಷಕರು ಮಗಳ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದಾರೆ.

ಪ್ರಕರಣದ ಬಗ್ಗೆ ನೆರೆಮನೆಯವರು ಫೋಲೀಸರಿಗೆ ದೂರು ನೀಡಿದ್ದು ದೂರು ಸ್ಥಳಕ್ಕೆ ಆಗಮಿಸಿದ ಫೋಲೀಸರು ಅಂತ್ಯಸಂಸ್ಕಾರವನ್ನು ತಡೆದು ಸುಗ್ರೀತಾ ಶವವನ್ನು ಮರಣೋತ್ತರಕ್ಕೆ ಕಳಿಸಿ, ಫೋಷಕರನ್ನು ವಶಕ್ಕೆ ಪಡೆದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ